Haridasa Sahitya — Vyasadasa

Muttu kolliro

ಮುತ್ತು ಕೊಳ್ಳಿರೊ

Composer: Purandara Dasaru · Deity: Hari · Genre: Philosophy

Kannada lyrics

ಮುತ್ತು ಕೊಳ್ಳಿರೊ||pa|| ಮುತ್ತು ಬಂದಿದೆ ಕೊಳ್ಳಿ ಸಚ್ಚಿದಾನಂದ ದಿವ್ಯ||a.pa|| ಜ್ಞಾನವೆಂಬೋ ದಾರದಲಿ ಪೋಣಿಸಿದ ದಿವ್ಯ ಮುತ್ತು ಜ್ಞಾನದಿಂದ ಕೊಂಬುದಿದನು ದೀನರಾದ ಭಕ್ತ ಜನರು||1|| ಕಟ್ಟಲಾಗದು ಮೂಗಿನಲಿ ಇಟ್ಟು ಮೆರೆಯಲಾಗದಿದು ಭ್ರಷ್ಟ ಜನಕೆ ಕಾಣಿಸದಂಥ ಕೃಷ್ಣನೆಂಬೊ ಅಣಿಮುತ್ತು||2|| ಹಿಡಿಯಲಿಕ್ಕೆ ನಿಲುಕದದು ಕಡೆ ಕಾಣದೆಂದು ಬೆಲೆಯು ಪೊಡವಿಗೆಲ್ಲ ಪುರಂದರವಿಠಲ ಒಡೆಯನೆಂಬೊ ದಿವ್ಯ ಮುತ್ತು||3||

Transliteration

Muttu kolliro janaru Muttu kolliro||pa|| Muttu bandide kolli Saccidananda divya||a.pa|| J~janavembo daradali Ponisida divya muttu J~janadinda kombudidanu Dinarada Bakta janaru||1|| Kattalagadu muginali Ittu mereyalagadidu Brashta janake kanisadantha Krushnanembo animuttu||2|| Hidiyalikke nilukadadu Kade kanadendu beleyu Podavigella purandaravithala Odeyanembo divya muttu||3||