Haridasa Sahitya — Vyasadasa
Muttadiru ennanu rangayya
ಮುಟ್ಟದಿರೊ ಎನ್ನನು –
Composer: Kanakadasaru · Deity: Krishna / Govinda / Mukunda · Genre: Bhakti
Kannada lyrics
ಮುಟ್ಟದಿರೊ ಎನ್ನನು – ರಂಗಯ್ಯಮುಟ್ಟದಿರೊ ಎನ್ನನು ||pa|| ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆಮುತ್ತೆಲ್ಲ ಸಡಲ್ಯಾವೊ ಹೇ ಮುದ್ದುರಂಗ ||a.pa| ಅತ್ತೆಯೊಬ್ಬಳ ಕೂಡ ಆಡಿ ಬರುವುದ ಕಂಡೆ| ಸತ್ಯವ ಮಾಡದಿರೊ – ಹೇ ಸರಿನಂಟ | ನೂರೆಂಟ ಬಣ್ಣದ ಬಂಟ ಬಿಡು ಎನ್ನ ಗಂಟ||1|| ಹಡೆದವರ ತಲೆಗೆ ಮರಳು ಚೆಲ್ಲಿದಂತೆಮಡದೇರ | ಕೂಡ್ಯಾಡಿ – ಕಲಿತ್ಯೆಲ್ಲೊ ಮಿರುಗ ದಿಮ್ಮದಿರುಗ ಸೊಕ್ಕಿಮುರುಗ ಬಿಡು ಎನ್ನ ಸೆರಗ ||2|| ಅಂಗೈಯ ನೊರೆಹಾಲು ಮುಂಗೈಯ ಮೇಲುಗಡೆ| ಸಿಂಗಾರವಾದುದ – ಕಂಡೆ ಕಲೆಯ ಕಾಗಿನೆಲೆಯ | ಬಟ್ಟಮೊಲೆಯ ಕನಕಯ್ಯನಿಗೊಲೆಯ ||3||
Transliteration
muttadiru ennanu rangayya | muttadiru ennanu mungaiya sulivige | mutengla sadaluvavo | e mudduranga | pa | erale kangale bale kereya maralu celli | geletera kudadi kalienglo bedaga | sokkinhuduga bidu enna seraga | 1 | attalobbala kuda adi baruvuda kande | satyava madadiro e savinenta | bannana banta bidu enna ganta |2| angaiya aragini mungaiya murahari | srungaravagitte na kanta katiya kagineleya…