Haridasa Sahitya — Vyasadasa
Murutiyane nilliso
ಮೂರುತಿಯನೆ ನಿಲ್ಲಿಸೋ
Composer: Purandara Dasaru · Deity: Hari · Genre: Bhakti
Kannada lyrics
ಮೂರುತಿಯನೆ ನಿಲ್ಲಿಸೋ ಮಾಧವ ನಿನ್ನ ||ಪ|| ಎಳೆ ತುಳಸಿಯ ವನಮಾಲೆಯು ಕೊರಳೊಳು ಹೊಳೆವ ಪೀತಾಂಬರದಿಂದಲೊಪ್ಪುವ ನಿನ್ನ ||೧|| ಮುತ್ತಿನ ಸರ ನವರತ್ನದುಂಗುರವಿಟ್ಟು ಮತ್ತೆ ಶ್ರೀ ಲಕುಮಿಯ ಉರದೊಳೊಪ್ಪುವ ನಿನ್ನ ||೨|| ಭಕ್ತರ ಕಲ್ಪತರು ಭಾಗ್ಯದ ಸುರಧೇನು ಮುಕ್ತಿದಾಯಕ ಸಿರಿ ಪುರಂದರ ವಿಠಲ ನಿನ್ನ ||೩||
Transliteration
Murutiyane nilliso madhava ninna ||pa|| Ele tulasiya vanamaleyu koralolu Holeva pitambaradindaloppuva ninna ||1|| Muttina sara navaratnadunguravittu Matte sri lakumiya uradoloppuva ninna ||2|| Baktara kalpataru bagyada suradhenu Muktidayaka siri purandara vithala ninna ||3||