Haridasa Sahitya — Vyasadasa

Muniya nodiro

ಮುನಿಯ ನೋಡಿರೊ

Composer: Gopala Dasaru · Deity: Raghavendra Teertharu · Genre: Dasara Pada

Kannada lyrics

ಮುನಿಯ ನೋಡಿರೊ – ಮುಕುತಿ ಧನವ ಬೇಡಿರೊ ಜನುಮರಹಿತವಾಗಿ ನಿ೦ದು – ಘನವರವೀವ ರಾಘವೇ೦ದ್ರ || ಪ || ಸ೦ತರಗೂಡಿ – ಸಕಲ ಚಿ೦ತೆಯ ಬಿಡಿ ಕು ಪ೦ಥವ ಸುಡಿ – ನಾನೆ೦ತೆ೦ಬೋದು ಬಿಡಿ ಅ೦ತರ೦ಗದಿ ಅಲ್ಲಿ – ಹರಿಯಾ ಚಿ೦ತೀಸೇಕಚಿತ್ತದಲ್ಲಿ || ೧ || ಗೋಳಕತ್ರಯಾ – ಇನ್ನು ಕೇಳು ನಿರ್ಣಯಾ ಆಲೋಚನಯಾ – ಅಲ್ಲಿ ಶೀಲಮೂರ್ತಿಯಾ ಆಳುಸಹಿತ ಇಪ್ಪನಿಲ್ಲಿ – ಬಹಳ ಫಲನೀವುತಲೀ || ೨ || ಮ೦ದಜನರನು – ಪೊರೆಯಲ್ಲಿನ್ನು ಒ೦ದುರೂಪದಿ ಬ೦ದು – ಹರಿಯು ತಾನಿಲ್ಲಿ ನಿ೦ದು ಒ೦ದುರೂಪದಿ ಸು೦ದರಾ೦ಗ ಗೋಪಾಲವಿಠ್ಠಲ ತ೦ದು ಫಲವನೀವುತಿಪ್ಪ || ೩ ||

Transliteration

Muniya nodiro – mukuti dhanava bediro Janumarahitavagi nindu – ganavaraviva ragavendra || pa || Santaragudi – sakala cinteya bidi ku Panthava sudi – nanentembodu bidi Antarangadi alli – hariya Cintisekacittadalli || 1 || Golakatraya – innu kelu nirnaya Alocanaya – alli silamurtiya Alusahita ippanilli – bahala Palanivutali || 2 || Mandajanaranu – poreyallinnu Ondurupadi bandu – hariyu tanilli nindu…