Haridasa Sahitya — Vyasadasa

Mukya Kaarana vishnu sarvesha

ಮುಖ್ಯಕಾರಣ ವಿಷ್ಣು ಸರ್ವೇಶ

Composer: Gopala Dasaru · Deity: Hari · Genre: Philosophy

Kannada lyrics

ಮುಖ್ಯಕಾರಣ ವಿಷ್ಣು ಸರ್ವೇಶ ಸಖ್ಯ ಸತ್ವರ ಪೋಷ್ಯ ಸರಸಿಜಾದ್ಯಮರೇಶ||ಪ|| ತಿಳಿವೆಂಬುವ ನೀನೆ ತಿಳಿದು ತಿಳಿಸುವ ನೀನೆ ತಿಳಿವ ವಸ್ತುವು ನೀನೆ ತೀರ್ಥಪದನೆ ತಿಳಿದುದಕೆ ಫಲ ನೀನೆ ತಿಳಿಯಗೊಡದವ ನೀನೆ ತಿಳಿವ ಸ್ವತಂತ್ರ ನಿನ್ನದು ತಿಳಿಸೊ ಸರ್ವೇಶ ||೧|| ಧ್ವನಿ ವರ್ಣ ಉಭಯ ಶಬ್ದದ ವಾಚ್ಯನು ನೀನೆ ಗುಣ ದೇಶ ಕಾಲ ಕರ್ಮದನು ನೀನೆ ತನು ಕರಣ ವಿಷಯ ಮನ ಜೀವಸ್ವಾಮಿಯು ನೀನೆ ಅಣುಮಹಜ್ಜಗದಿ ಬಹಿರಂತರದಿ ವ್ಯಾಪ್ತ ||೨|| ವ್ಯಾಸಕಪಿಲ ಹಯಾಸ್ಯ ಧನ್ವಂತ್ರಿ ವೃಷಭ ಮಹಿ- ದಾಸ ದತ್ತಾತ್ರಯಾದ್ಯಮಿತ ರೂಪ ಈಸು ರೂಪದಿ ಜ್ಞಾನವಧಿಕಾರಿಗಳಿಗೊರೆದು ಪೋಷಕನು ಆದೆ ಕೃಪಾಳುವೆ ಶ್ರೀಶ ||೩|| ಚೇತನನು ನಾನು ನೀ ಚೇಷ್ಟೆ ಮಾಡಿಸಲಾಗ- ಚೇತನನು ಸರಿ ನ…

Transliteration

Mukyakarana vishnu sarvesa Sakya satvara poshya sarasijadyamaresa||pa|| Tilivembuva nine tilidu tilisuva nine Tiliva vastuvu nine tirthapadane Tilidudake Pala nine tiliyagodadava nine Tiliva svatantra ninnadu tiliso sarvesa ||1|| Dhvani varna ubaya Sabdada vacyanu nine Guna desa kala karmadanu nine Tanu karana vishaya mana jivasvamiyu nine Anumahajjagadi bahiramtaradi vyapta ||2|| Vyasakapila haya…