Haridasa Sahitya — Vyasadasa
Muddu maada baarade
ಮುದ್ದು ಮದಬರದೇನೇ ಮುದ್ದು ಮಯದೇವಿ ?
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಮುದ್ದು ಮಾಡಬಾರದೇನೆ ಮುದ್ದು ಮಾಯಾ ದೇವಿಯ ಮುದ್ದು ಬಾಲಕೃಷ್ಣನಲ್ಲಿ ಮನಸು ನಿಲ್ಲುವ ಹಾಗೆ ಕರಗಳಿಂದ ಹರಿಯ ಮಂದಿರದ ಕಸವ ತೆಗೆವಲಿಕ್ಕೆ ನಿರುತದಲ್ಲಿ ಬೇಸರಿಯದೆ ಹರುಷ ಉಕ್ಕಡುವ ಹಾಗೆ ರಾಮಾಯಣ ಭಾಗವತ ಪಂಚ ರಾತ್ರಾಗಮಾದಿ ಕಥೆಯ ಕೇಳುವುದಕೆ ಬಹಳ ರತಿಯು ಪುಟ್ಟುವ ಹಾಗೆ ದೇಹವು ಅನಿತ್ಯವೆಂದು ನೇಹದಿಂದ ಪೋಷಿಸದಲೆ ಮಾಹೇಂದ್ರ ವರದನ ಅಹರಹರವು ಭಜಿಪ ಹಾಗೆ ಮನಸು ಆ ಕಾಯಗಳಿಂದ ಪುರಂದರ ವಿಠಲನ ಅನುರಾಗದಿ ಬಿಡದೆ ಪಾಡಿ ಕುಣಿದು ಕುಣಿದು ದಣಿವ ಹಾಗೆ
Transliteration
Muddu madabaradene muddu mayadevi ? ||pa.|| Muddu balakrushnanalli manasu nilluva hage ||a pa|| Karagalinda hariya mandirada kasava tegeyalikke |nirutadallu besariyade harushavu puttava hage ||1|| Sruti – ramayana sribagavata pancharatragamadi katheya Keluvudake bahala ratiyu puttuva hage ||2|| Dehavu anityavendu nehadimda poshisadale | Mahendravarajana aha raharavu Bajisuva hage ||3|| Nararastava…