Haridasa Sahitya — Vyasadasa
Mosaru tandino ranga margava
ಮೊಸರು ತಂದಿನೊ ರಂಗಾ ಮಾರ್ಗವ
Composer: Vijaya Dasaru · Deity: Hari · Genre: Bhakti
Kannada lyrics
ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ ಕಿಸರು ಹೊರಲಿ ಬೇಡ ಕಲಕೆ ಸಾರೊ ।।ಪ॥ ಪಶುಗಾವಿ ನೀ ಎನ್ನ ಹೆಸರುಗೊಳಲಿಬೇಡ ಹಸನಾದ ಮುತ್ತಿನ ಸರಗಳು ಹರಿದಾವೋ ನಿಶೆಯ ವೇಳೆಯು ಅಲ್ಲಾ ನಿನಗೆ ಬುದ್ಧಿಯು ಸಲ್ಲಾ ವಶಕರವಾಗುವಳೆ ಒಲವು ಇಲ್ಲದೆ ।।೧।। ಎದೆಯ ಮುಟ್ಟಲಿ ಬೇಡ ಎಳೆನಗೆ ನಗಲಿ ಬೇಡ ಬದಿ ಬಗಲು ಪಿಡಿದು ನೋಡವರೆ ಹೀಗೆ ಕದವ ಮುಚ್ಚಿಕೊಂಡು ಕಾಕು ಎಬ್ಬಿಸುವರೆ ಸದನಕ್ಕೆ ಹೋಗಬೇಕು ಸರಸವೆಕೋ ।।೨।। ಹಿಂದೆ ಬಂದವರು ಏನೆಂದು ಒಲಿದರೊ ಕಾಣೆ ಒಂದಿಷ್ಟು ಚೆಂದವಿಲ್ಲ ಚೆಲುವಿಕೆಯಿಲ್ಲಾ ಕಂದರ್ಪಕೋಟಿ ತೇಜ ವಿಜಯವಿಠ್ಠಲ ಎನ್ನ ಮಂದಿರಕೆ ಬಾರೊ ನಿನ್ನ ಮನಸು ದಣಿಸುವೆ ।।೩।।
Transliteration
Mosaru tandino ranga margava bido Kisaru horali beda kalake saro ||pa|| Pasugavi ni enna hesarugolalibeda Hasanada muttina saragalu haridavo Niseya veleyu alla ninage buddhiyu salla Vasakaravaguvale olavu illade ||1|| Edeya muttali beda elenage nagali beda Badi bagalu pididu nodavare hige Kadava muccikondu kaku ebbisuvare Sadanakke hogabeku sarasaveko ||2|| Hinde bandavaru Enendu olidaro kane Ondi…