Haridasa Sahitya — Vyasadasa
Mooru namagala darisida
ಮೂರು ನಾಮಗಳ ಧರಿಸಿದ
Composer: Gopala Dasaru · Deity: Srinivasa / Venkatesha · Genre: Bhakti
Kannada lyrics
ಮೂರು ನಾಮಗಳ ಧರಿಸಿದ ಕಾರಣವೇನು ಸಾರಿ ಪೇಳಲೋ ಈಗಲೇ||pa|| ಶ್ರೀ ರಮಾಪತಿ ಶ್ರೀನಿವಾಸ ವೆಂಕಟರಮಣ ಯಾರು ಇಟ್ಟರೊ ನಿನಗೆ ಮೂರು ನಾಮಗಳ |a.pa| ಶುದ್ಧ ವೈಷ್ಣವರೆಲ್ಲ ಶುದ್ಧ ಮೂರುತಿ ಎಂದು | ಶುದ್ಧ ಪಾದಕೆ ಎರಗಿ ಕರವ ಮುಗಿದು | ಎದ್ದು ನೋಡಲು ನಿನ್ನ ಪಣೆಯೊಳೀಪರಿ ಇರಲು ಮಧ್ವಮತದ ದೈವವೆಂದು ನಿನ್ನ ಕರೆಯುವರೆ||1|| ಸಾಲದೆ ನಿನ್ನ ಸೌಂದರ್ಯಕ್ಕೆ ಒಂದು ತಿಲಕ | ಪಾಲಸಾಗರಶಾಯಿ ಚೆಲುವಮೂರ್ತಿ| ಕಾಲಕಾಲಕೆ ಬರುವ ಭಕುತಜನಗಳ ವೃಂದ | ದೃಷ್ಟಿತಾಕುವುದೆಂಬ ತೋರುವ ಬಗೆಯೊ||2|| ಮೂರು ಲೋಕಗಳಿಹವು ಮೂರುರೂಪನ ನಾನು| ಮೂರು ಮಾಳ್ಪೆನು ಜಗವ ಮೂರು ಗುಣದಿ | ಮೂರು ತಾಪವಗೆದ್ದು ಮಾರ್ಗದಿ ಭಜಿಸೆ| ಪಾರು ಮಾಡುವೆನೆಂದು ತೋರುವ ಬಗೆಯೊ…
Transliteration
Sri ramapati srinivasa venkataramana Yaru ittaro ninage muru namagala | Suddha vaishnavarella Suddha muruti endu | Suddha padake eragi karava mugidu | Eddu nodalu ninna paneyolipari iralu Madhvamatada daivavendu ninna kareyuvare|| Salade ninna saundaryakke ondu tilaka | Palasagarasayi celuvamurti| Kalakalake baruva bakutajanagala vrunda | Drushtitakuvudemba toruva bageyo|| Muru lokagalihavu mururu…