Haridasa Sahitya — Vyasadasa

Moola Raama devaru suladhi (Rayar mutt)

ಮೂಲರಾಮದೇವರ ಸುಳಾದಿ

Composer: Vijaya Dasaru · Deity: Rama · Genre: Sulaadi

Kannada lyrics

ಧೃವತಾಳ- ವಂದೆ ಮುಕುಂದ ಮುಚುಕುಂದ ಪರಿಪಾಲಕ| ಕುಂದೇಂದು ವದನ ಆನಂದ ಮೂರ್ತಿ| ಗಂಧ ದೋಷ ದೂರವಾಗಿದ್ದ ಚಿತ್ ಪ್ರಕೃತಿ| ಯಿಂದ ನೋಡೆ ಚತುರ್ವಿಧ ದೋಷ ದೂರಾ| ವಂದೇ ಮುಕುಂದ ನಮೋ ವೃಂದಾರಕ ಮುನಿ| ವೃಂದ ವಂದ್ಯ ಸುಖಸಾಂದ್ರ ಸರ್ವೋತ್ತಮಾ| ಮಂದಹಾಸ ಮಂದಾಕಿನಿ ಜನಕ| ಸುಂದರೀನಾಥ ಗೋವಿಂದ ಇಂದೀವರದಳ ಶ್ಯಾಮ| ಕಂದರ್ಪ ಕೋಟಿ ಲಾವಣ್ಯ ತಾರುಣ್ಯ ಸದ| ಮಂದಿರಾ ವೈಕುಂಠ ವೈನತೇಯಾ ಶ್ಯಂದನ| ಸ್ಕಂದ ಸನಂದನಪ್ರಿಯ ಪುರಂದರ ನಂದನ್ನ ಮಾನಭಂಗ| ಇಂಧನಭೋಕ್ತಾ ನೇತ್ರ ಒಂದೊಂದು| ಒಂದಾರು ಮೇಲೋಂದು ಕಂಧರನ ಗೋಸುಗ ಅಹಮತಿಯಲ್ಲಿ| ಬಂದು ನಿಂದೆದಿರಾಗೆ ಜಡಮಾಡಿ ನಿಲಿಸಿದ ಅ| ರಿಂದರು ದಮ ಶಾಂತ ಪೂರ್ಣಾಪೂರ್ಣಾ| ವಂದೆ ಮುಕುಂದ ನಮೊ| ನಂದ ಗೋಕುಲ ಪ…

Transliteration

-dhruva tala- Vande mukunda muchukunda paripalaka| Kundendu vadana Ananda murti| Gandha dosha duravagidda cit prakruti| Yinda node chaturvidha dosha dura| Vande mukunda namo vrundaraka muni| Vrunda vandya sukasandra sarvottama| Mandahasa mandakini janaka| Sundarinatha govinda indivaradala syama| Kandarpa koti lavanya tarunya sada| Mandira vaikuntha vainateya Syandana| Skanda sanandanapriya puranda…