Haridasa Sahitya — Vyasadasa

Sriharipada prarthana sulaadhi

ಶ್ರೀಹರಿಪಾದ ಪ್ರಾರ್ಥನಾ ಸುಳಾದಿ

Composer: Mohana Dasaru · Deity: Hari · Genre: Sulaadi

Kannada lyrics

ಶ್ರೀಹರಿಪಾದ ಪ್ರಾರ್ಥನಾ ಸುಳಾದಿ ವಿಷಯ: ಇಂದ್ರಿಯಗಳ ದುರ್ವ್ಯಾಪಾರ ಬಿಡಿಸಿ, ಹರಿಪಾದದಲ್ಲಿ ರತಿ ಕೊಡಲು ಪ್ರಾರ್ಥನೆ ರಾಗ: ಕಾಂಬೋಧಿ ಅಂಕಿತ: ಮೋಹನವಿಠ್ಠಲ ಧ್ರುವತಾಳ ಶ್ರೋತ್ರ ನಿನ್ನ ಕಥೆ ಕೇಳಲೊಲ್ಲದು, ಪರ- ಮಾತುರದಿಂದ ದುರ್ವಾರ್ತೆ ಕೇಳುತಲಿದೆ. ನೇತ್ರ ನಿನ್ನ ಮೂರ್ತಿಯ ನೋಡದಲೂ, ಗಾಡಿ- ಕಾರ್ತಿಯರನ್ನು ಮನದಣಿಯ ನೋಡುತಲಿದೆ. ಗಾತ್ರ ನಿನ್ನ ದಾಸರನಪ್ಪದೆ, ಕಾ- ಮಾತುರದಿಂದ ಕಂಡವರನಪ್ಪುತಲಿದೆ. ಪೂತ ಪದಾರ್ಥವ ಭುಂಜಿಸದಲೂ, ಜಿಹ್ವೆ ಪಾತಕರ ದುಷ್ಟ ಅನ್ನ ಕೊಳುತಲಿದೆ. ಶ್ರೀತುಳಸೀ ಆಘ್ರಾಣಿಸದಲೂ ಮೂಗು, ಬಾತಿ ಬಸಿದ ಕುಗಂಧ ಕೊಡುತಲಿದೆ. ಯಾತರಿಂದಲಿ ನಿನ್ನ ಮನಕೆ ಬಪ್ಪೆನೋ ದೇವ? ಕೋತಿ ಕೊರವಂಗೆ ಸಿಲುಕಿದಂತಾಯಿತು. ಜ್…