Haridasa Sahitya — Vyasadasa
Sadhana vichara sulaadhi
ಸಾಧನಾ ವಿಚಾರ ಸುಳಾದಿ
Composer: Mohana Dasaru · Deity: Hari · Genre: Sulaadi
Kannada lyrics
ಸಾಧನಾ ವಿಚಾರ ಸುಳಾದಿ ರಾಗ: ಕಾನಡ ಅಂಕಿತ: ಮೋಹನವಿಠ್ಠಲ ಧ್ರುವತಾಳ ಹರಿದಾಸನು ನಾನಲ್ಲ, ಹರಿಭಕುತಿ ಎನಗಿಲ್ಲ, ಧರೆಯೊಳು ಒಂದು ವೇಷವ ಧರಿಸಿ ತಿರುಗುವೆನು ನಾನು. ತರುಣಿ ಮಕ್ಕಳು ಸಹೋದರ ಮೊದಲಾದವರ ಪೊರೆವೆನೆನ್ನುತ ಡಂಭ ವಿರಚಿಸಿ, ಶರಣನೆಂತೆಂದು ಕರೆಸಿಕೊಂಡೆನೋ ಬಹಿರದಲ್ಲಿ ಅನ್ಯರಿಂದಲೂ. ಸಿರಿಪತಿ, ನಿನ್ನ ಪಾದ ಸ್ಮರಿಸದಲೂ, ಪರಮ ದಯಾಳು ಮೋಹನವಿಠ್ಠಲರೇಯ, ಕರಣಶುದ್ಧನಾಗದೆ ತಿರುಗಿದೆ ಪಟ್ಟಿಗಾಗಿ ॥೧॥ ಮಠ್ಯತಾಳ ದೇಶ ದೇಶಕೆ ಧನದ ಆಶೆಗಾಗಿ ಪೋಗಿ, ಕಾಶಿಗೆ ಹೋಗುವೆನೆಂದು ಕಾಸು ಹಣವ ತಂದು, ಈ ಸಂಸಾರಕ್ಕೆ ನಾ ಸಮರ್ಪಿಸಿ, ತೋಷಪಡುವೆ ದುರಿತರಾಶಿಯೆಂದರಿಯದಲೂ. ಭೂಸುರರು ಎನ್ನ ವಾಸದಲ್ಲಿ ಬರಲು, ಗಾರ ಸವಿಯದೆ ಅಪಹಾಸ ಮಾಡು…