Haridasa Sahitya — Vyasadasa
Panchabheda taratamya sulaadhi
ಪಂಚಭೇದ ತಾರತಮ್ಯ ಸುಳಾದಿ
Composer: Mohana Dasaru · Deity: Hari · Genre: Sulaadi
Kannada lyrics
ಪಂಚಭೇದ ತಾರತಮ್ಯ ಸುಳಾದಿ ವಿಷಯ: ಪಂಚಭೇದ ತಾರತಮ್ಯ, ಹರಿಭಕ್ತರಿಗೆ ಪಾಪಫಲ ಬಾರದು ಇತ್ಯಾದಿ ವಿಷಯ ರಾಗ: ಹಂಸಧ್ವನಿ ಅಂಕಿತ: ಮೋಹನವಿಠ್ಠಲ ಧ್ರುವತಾಳ ಹರಿಯೇ ಸರ್ವೋತ್ತಮ, ಸಿರಿಯು ಆತನ ರಾಣಿ, ಸರಸಿಜೋದ್ಭವ ಮರುತ ಪುತ್ರರಯ್ಯ. ಸರಸ್ವತಿ ಭಾರತಿ ಗರುಡ ಶೇಷ ರುದ್ರ, ಹರಿಯ ರಾಣಿಯರು ನಾಲ್ಕೆರಡು ಮಂದಿ, ಸೌಪರ್ಣಿ ವಾರುಣಿ ಗಿರಿಜಾ ಸುರಪತಿ ಕಾಮಾದ್ಯರ ತಾರತಮ್ಯ ಜ್ಞಾನದಿಂದ ತಿಳಿಯಬೇಕು. ಸುರನದಿಪಿತ ನಮ್ಮ ಮೋಹನವಿಠ್ಠಲ, ಶರಣು ನೆನಿಸಿದವಗೆ ಇನ್ನು ಸರಿಯು ಕಾಣೆ ॥೧॥ ಮಠ್ಯತಾಳ ಜೀವ ಜೀವಕೆ ಭೇದ, ಜಡ ಜಡಕೆ ಭೇದ, ಜೀವ ಜಡಕೆ ಭೇದ, ಹರಿಗೆ ಜಡಕೆ ಭೇದ, ಜೀವ ಈಶಗೆ ಭೇದ. ದೇವ ನಾರಾಯಣನ ಭಾವಕ್ರಿಯೆಗಳಿಗೆ ಅಭೇದವನ್ನು ತಿಳಿದು, ಶ್…