Haridasa Sahitya — Vyasadasa

Mecchidhe yakamma lakumi

ಮೆಚ್ಚಿದೆ ಯಾಕಮ್ಮ ಲಕ್ಕುಮಿದೇವಿ

Composer: Haridasa · Deity: Lakshmi Devi · Genre: Dasara Pada

Kannada lyrics

ಮೆಚ್ಚಿದೆ ಯಾಕಮ್ಮ ಲಕ್ಕುಮಿದೇವಿ ಸಚ್ಚಿದಾನಂದಾತ್ಮ ಹರಿಯೆಂದರಿಯದಲೆ ||pa|| ರಕ್ಕಸಾಂತಕ ಹರಿಗೆ ಸೊಗಸಿನ ತಕ್ಕ ವಾಹನವಿಲ್ಲದಿದ್ದೊಡೆ ಹಕ್ಕಿಯ ಹೆಗಲೇರಿ ತಿರುಗುವ ಚಿಕ್ಕ ಬುದ್ಧಿಯ ಚಲುವ ಕೃಷ್ಣಗೆ||a.pa|| ನೀರೊಳು ಮುಳುಗಿ ಭಾರವಪೊತ್ತು ಧರಣಿಯ ಕೋರೆದಾಡೆಲಿ ತಂದ ಕ್ರೂರ ರೂಪನಿಗೆ ಮೂರಡಿ ಭೂಮಿಯ ಬೇಡಿ ಕ್ಷಿತಿಪರ ಕೊಂದು ನಾರು ವಸ್ತ್ರಗಳುಟ್ಟು ಸೀರೆ ಕದ್ದವಗೆ ಶೂರತನದಲಿ ತ್ರಿಪುರರಗೆದ್ದು ವಿ- ಹಾರ ಮಾಡ್ಡ ಏರ್ದ ಕುದುರೆಯ ಮಾರಪಿತ ಮಧುಸೂಧನನ ವ್ಯಾ- ಪಾರ ತಿಳಿಯದೆ ವಾರಿಜಾಕ್ಷಿ ||1|| ಹಾಸಿಕಿಲ್ಲದೆ ಹಾವಿನ ಮೇಲೆ ಮಲಗುವ ಹೇಸಿಕಿಲ್ಲದೆ ಎಂಜಲ್ಹಣ್ಣನೆ ಮೆಲುವ ದೋಷಕಂಜದೆ ಮಾವನ ಕೊಂದು ಮಧುರೆಲಿ ದಾಸಿ ಕುಬ್ಜೆಯ ಡೊಂಕು…

Transliteration

Meccide yakamma lakkumidevi sacchidanandatma hariyendariyadale ||pa|| Rakkasantaka harige sogasina Takka vahanavilladiddode Hakkiya hegaleri tiruguva Chikka buddhiya chaluva krushnage ||a.pa|| Nirolu mulugi baravapottu dharaniya Koredadeli tanda krura rupanige Muradi bumiya bedi kshitipara kondu Naru vastragaluttu sire kaddavage Suratanadali tripurarageddu vi- Hara madda Erda kudureya Marapita mad…