Haridasa Sahitya — Vyasadasa
Matanadai mannari krushna
ಮಾತನಾಡೈ ಮನ್ನಾರಿ ಕೃಷ್ಣ
Composer: Vijaya Dasaru · Deity: Hari · Genre: Bhakti
Kannada lyrics
ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ||pa|| ದಾತನು ನೀನೆಂದು ಬಯಸಿ ಬಂದೆನು ಮಾತನಾಡೈ||a.pa|| ಊದುವ ಸಿರಿ ಪೊಂಗೊಳಲೊ ಜಗ-| ದಾಧಾರದ ನಿಜ ಹೊಳೆಯೋ || ಪಾದದ ಪೊಂಗೆಜ್ಜೆ ಥಳಿಲೊ ಸರ್ವ | ವೇದಗಳರಸುವ ಕಲ್ಪಕ ಸೆಳಲೊ ||1|| ಕಸ್ತೂರಿ ತಿಲಕದ ಮದವೊ ಮ- ಕುಟ ಮಸ್ತಕದಿ ಝಗಝಗವೊ || ವಿಸ್ತರದಿ ಪೊತ್ತ ಜಗವೊ ಪರ- | ವಸ್ತುವು ನಂದ ಯಶೋದೆಯ ಮಗುವೊ ||2|| ನವನೀತವ ಪಿಡಿದ ಕರವೊ ನವ-| ನವ ಮೋಹನ ಶೃಂಗಾರವೊ || ಅವತರಿಸಿದ ಸುರತರುವೊ ಶತ- ರವಿಯಂದದಿ ಉಂಗುರವಿಟ್ಟ ಭರವೊ ||3|| ಆನಂದ ಸುಜ್ಞಾನದ ಹೃದವೊ ಶುಭ-| ಮಾನವರಿಗೆ ಬಲು ಮೃದುವೊ || ಆನನ ಛವಿಯೊಳು ಮಿದುವೊ ಪಾಪ-| ಕಾನನ ದಹಿಸುವ ಪಾವಕ ಪದವೊ ||4|| ತ್ರಿಜಗದಧಿಕ ಪಾವನನೊ ಪಂ-…
Transliteration
Matanadai mannari krushna matanadai ||pa|| Datanu ninendu bayasi bandenu matanadai||a.pa|| Uduva siri pongolalo jaga-| Dadharada nija holeyo || Padada pongejje thalilo sarva | Vedagalarasuva kalpaka selalo ||1|| Kasturi tilakada madavo ma- Kuta mastakadi jagajagavo || Vistaradi potta jagavo para- | Vastuvu nanda yasodeya maguvo ||2|| Navanitava pidida karavo nava-| Nava mohana srungaravo || Avatar…