Haridasa Sahitya — Vyasadasa

Marudamsara mata

ಮರುದಂಶರ ಮತ

Composer: Sripadarajaru · Deity: Sri Madhwacharyaru · Genre: Dasara Pada

Kannada lyrics

ಮರುದಂಶರ ಮತ ಪಿಡಿಯದೆ ಇಹ -ಪರದಲ್ಲಿ ಸುಖವಿಲ್ಲವಂತೆ|| ಪ|| ಅರಿತು ವಿವೇಕದಿ ಮರೆಯದೆ ನಮ್ಮಗುರುರಾಯರ ನಂಬಿ ಬದುಕಿರೋ ||ಅ.ಪ|| ಕ್ಷೀರವ ಕರೆದಿಟ್ಟ ಮಾತ್ರದಿ ಸಂಸ್ಕಾರವಿಲ್ಲದೆ ಘೃತವಾಗದಂತೆ ಸೂರಿಜನರ ಸಂಗವಿಲ್ಲದೆ ಸಾರವೈರಾಗ್ಯ ಭಾಗ್ಯ ಪುಟ್ಟದಂತೆ || ಉಪದೇಶವಿಲ್ಲದ ಮಂತ್ರ ಏಸುಜಪಿಸಲು ಫಲಗಳ ಕೊಡದಂತೆ ಉಪವಾಸ ವ್ರತಗಳಿಲ್ಲದೆ ಜೀವತಪಸಿಯೆನಿಸಿಕೊಳ್ಳಲರಿಯನಂತೆ || ಸಾರಮಧ್ವಶಾಸ್ತ್ರವೋದದೆ ಗುರುತಾರತಮ್ಯ ಸುಜ್ಞಾನ ಪುಟ್ಟದಂತೆ ಶ್ರೀರಂಗವಿಠಲನ ಭಜಿಸದೆ ಮುಂದೆಪರಮಗತಿ ದೊರಕೊಳ್ಳದಂತೆ ||

Transliteration

Marudamsara mata pidiyade iha | paradalli sukavillavante || pa || Aritu vivekadi mareyade namma gururayara nambi badukiro || a pa || Kshirava kareditta matradi sam skaravilladegrutavagadante Surijanara samgavillade sara vairagyabagya puttadante || 1 || Upadesavillada mantra Esu japisalu palagala kodadante Upavasa-vratagalillade jiva tapasiyenisikolla lariyanante || 2 || Sara madasastravodade guru…