Haridasa Sahitya — Vyasadasa
Marayebeda manave
ಮರೆಯಬೇಡ ಮನವೇ
Composer: Purandara Dasaru · Deity: Hari · Genre: Bhakti
Kannada lyrics
ಮರೆಯಬೇಡ ಮನವೇ ನೀನು ಹರಿಯ ಸ್ಮರಣೆಯಾ ।।ಪ।। ಯಾಗ ಯಜ್ಞ ಮಾಡಲೇಕೆ ಯೋಗಿ ಯತಿಯು ಆಗಲೇಕೆ ನಾಗಶಯನ ನಾರದವಂದ್ಯನ ಕೂಗಿ ಭಜನೆ ಮಾಡೊ ಬೇಗೆ ।।೧।। ಸತಿಯು ಸುತರು ಹಿತರು ಎಂದು ಮತಿಯಗೆಟ್ಟು ಕೆಡಲಿಬೇಡ ಗತಿಯು ತಪ್ಪಿ ಹೋಗುವಾಗ ಸತಿಯು ಸುತರು ಬಾಹೊರೇನು ।।೨।। ಹರಿಯ ಸ್ಮರಣೆ ಮಾತ್ರದಿಂದ ಘೋರ ದುರಿತವೆಲ್ಲ ನಾಶ ಪರಮಪುರುಷ ಪುರಂದರವಿಠಲ ಪದವಿ ಕೊಡುವ ಪವನನಯ್ಯ ।।೩।।
Transliteration
Mareyabeda manave ninu Hariya smaraneya ||pa|| Yaga yaj~ja madaleke Yogi yatiyu agaleke Nagasayana naradavandyana Kugi Bajane mado bege ||1|| Satiyu sutaru hitaru endu Matiyagettu kedalibeda Gatiyu tappi hoguvaga Satiyu sutaru bahorenu ||2|| Hariya smarane matradinda Gora duritavella nasa Paramapurusha puranmdaravithala Padavi koduva pavananayya ||3||