Haridasa Sahitya — Vyasadasa
Maratheyeno ranga
ಮರೆತೆಯೇನೋ ರಂಗಾ
Composer: Sripadarajaru · Deity: Vishnu · Genre: Dasara Pada
Kannada lyrics
ಮರೆತೆಯೇನೋ ರಂಗಾ ಮಂಗಳಾಂಗ ತುರುಕರ ಕಾಯ್ವಲ್ಲಿ ತೊಂಡನಾಗಿದ್ದೆನ್ನ ||ಪ|| ಕೋಲು ಕೈಯಲಿ ಕೊಳಲು ಜೋಲುಗಂಬಳಿ ಹೆಗಲ ಮ್ಯಾಲೆ ಕಲ್ಲಿ ಚೀಲ ಕೊಂಕಳಲ್ಲಿ ಕಾಲಗಡಗವನಿಟ್ಟು ಕಾಡೊಳಿಹ ಪಶುಹಿಂಡ ಲಾಲಿಸುವ ಬಾಲಕರ ಮ್ಯಾಳದೊಳಗಿದ್ದೆನ್ನ ||೧|| ಕಲ್ಲು ಮಣಿ ಕವಡೆಯನು ಕಾಡೊಳಿಹ ಗುಲಗಂಜಿ ಸಲ್ಲದೊಡವೆಯ ನೀನು ಸರ್ವಾಂಗಕೆ ಅಲ್ಲಲ್ಲೆಸೆಯೆ ಧರಿಸಿ ನವಿಲಗರಿಗಳ ಗೊಂಡೆ ಅಲ್ಲಿ ಗೊಲ್ಲರ ಕೂಡ ಚಲ್ಲಾಟ ಮಾಡುತಲಿ ||೨|| ಸಿರಿದೇವಿ ಬಂದು ಸೇರಿದ ಬಳಿಕ ಲೋಕದಲಿ ಸಿರಿ ಅರಸನೆಂದು ಸೇವಕರರಿವರೋ ಶರಣಾಗತರ ಪೊರೆವ ಶ್ರೀರಂಗವಿಠಲಯ್ಯ ನರಸಿಂಗ ನೀನಿರುವ ಪರಿಯು ಮುಂದಿನ ಸಿರಿಯು||೩||
Transliteration
Mareteyeno ranga mangalanga turukara kayvalli tondanagiddenna ||pa|| Kolu kaiyali kolalu jolugambali hegala Myale kallicili konkalalli Kalagadagavanittu kadoliha pasuhinda Lalisuva balakara myaladolagiddenna ||1|| Kallu mani kavadeyanu kadoliha gulaganji Salladodaveya ninu sarvangake Allalleseye dharisi navilugarigala gonde Alli gollara kuda callata madutali ||2|| Siridevi bandu serida balika loka…