Haridasa Sahitya — Vyasadasa
Mannaru krushnage mangala
ಮನ್ನಾರು ಕೃಷ್ಣಗೆ ಮಂಗಳ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಮನ್ನಾರು ಕೃಷ್ಣಗೆ ಮಂಗಳ ಜಗವ ಮನ್ನಿಸಿದೊಡೆಯಗೆ ಮಂಗಳ ||ಪ|| ಬೊಮ್ಮನ ಪಡೆದಗೆ ಭಕ್ತರುದ್ಧಾರಿಗೆ ಕಮ್ಮಗೋಲನಯ್ಯಗೆ ಮಂಗಳ ಧರ್ಮರಕ್ಷಕನಿಗೆ ದಾನವಶಿಕ್ಷಗೆ ನಮ್ಮ ರಕ್ಷಕನಿಗೆ ಮಂಗಳ ||೧|| ತುರುಗಳ ಕಾಯ್ದಗೆ ಕರುಣಾಕರನಿಗೆ ಗಿರಿಯನೆತ್ತಿದವಗೆ ಮಂಗಳ ವರದ ತಿಮ್ಮಪ್ಪಗೆ ವಾರಿಜನಾಭಗೆ ಹರಿ ಸರ್ವೋತ್ತಮನಿಗೆ ಮಂಗಳ ||೨|| ದೇವಕಿದೇವಿಯ ತನಯಗೆ ಮಂಗಳ ದೇವ ತಿಮ್ಮಪ್ಪಗೆ ಮಂಗಳ ಮಾವನ ಕೊಂದು ಮಲ್ಲರ ಮಡುಹಿದ ಪುರಂದರವಿಠಲಗೆ ಮಂಗಳ ||೩||
Transliteration
Mannaru krushnage mangala Jagava mannisidodeyage mangala ||pa|| Bommana padedage baktaruddharige Kammagolanayyage mangala Dharmarakshakanige danavasikshage Namma rakshakanige mangala ||1|| Turugala kaydage karunakaranige Giriyanettidavage mangala Varada timmappage varijanabage Hari sarvottamanige mangala ||2|| Devakideviya tanayage mangala Deva timmappage mangala Mavana kondu mallara maduhida Pura…