Haridasa Sahitya — Vyasadasa
Mangalaratiya paadire
ಮಂಗಳಾರತಿಯ ಪಾಡಿರೆ
Composer: Kanakadasaru · Deity: Hari · Genre: Aarathi
Kannada lyrics
ಮಂಗಳಾರತಿಯ ಪಾಡಿರೆ ಮಾನಿನಿಯರು || ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ ಚಂದದಿ ಪಡೆದವನ ನಂದನೆಯಳ ನಲವಿಂದ ಧರಿಸಿದ ಮುಕುಂದನಿಗೆ || ರಥವನಡರಿ ಸುರ ಪಥದಲಿ ತಿರುಗುವನಸುತನಿಗೆ ಶಾಪವನಿತ್ತವನ ಖತಿಯನು ತಡೆದನ ಸತಿಯ ಜನನಿ ಸುತನಸತಿಯರನಾಳಿದ ಚತುರನಿಗೆ || ಹರಿಯ ಮಗನ ಶಿರ ತರಿದನ ತಂದೆಯಹಿರಿಯ ಮಗನ ತಂದೆಯ ಪಿತನಭರದಿ ಭುಜಿಸಿದವನ ಶಿರದಲಿ ನಟಿಸಿದವರ ಕಾಗಿನೆಲೆಯಾದಿಕೇಶವಗೆ ||
Transliteration
Mangalaratiya padire maniniyaru || pa || Andhakananujana kandana tandeye | Kondana Siradali nindavana | Candadi padedavana nandaneyala | nala | Vinda dharisida mukundage || 1 || Rathavanadaru sura pathadali tiruguvana | Sutanige sapava nittavana | Katiyanu tadedana satiya janani sutana | Satiyaranalida caturana || 2 || Hariya magana Sirana taridana tandeya | Hiriya magana tandeya pitana | Baradi B…