Haridasa Sahitya — Vyasadasa
Mangalam sri tulasi
ಮಂಗಳ ಶ್ರೀ ತುಳಸಿದೇವಿಗೆ
Composer: Purandara Dasaru · Deity: Tulasi · Genre: Bhakti
Kannada lyrics
ಮಂಗಳ ಶ್ರೀ ತುಳಸಿದೇವಿಗೆ ಜಯ ಮಂಗಳ ವೃಂದಾವನ ದೇವಿಗೆ ನೋಡಿದ ಮಾತ್ರಕೆ ದೋಷಸಂಹಾರಿಗೆ ಬೇಡಿದ ವರಗಳ ಕೊಡುವಳಿಗೆ ಮಾಡೆ ವಂದನೆಯನು ಮನುಜರ ಪಾಪದ ಗೂಡನೀಡಾಡುವ ಗುಣವಂತೆಗೆ ಮುಟ್ಟೀದ ಮಾತ್ರಕ್ಕೆ ಮುಕ್ತರ ಮಾಡುವ ಮುದದಿಂದುದ್ಧರಿಸುವ ಮುನಿ ವಂದ್ಯೆಗೆ ಕೊಟ್ಟರೆ ನೀರನು ಪೇರಿಗೆ ಕಾಲನ ಮುಟ್ಟಲೇಸದ ಹಾಗೆ ಮಾಳ್ಪಳಿಗೆ ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆ ಚಿತ್ತವಲ್ಲಭ ಕೃಷ್ಣನ ಹರುಷದಲಿ ಅತ್ಯಂತವಾಗಿ ತಾ ಭವದ ಬೇರ ಕಿತ್ತು ಬಿಸಾಡುವ ಕೋಮಲೆಗೆ ಕೋಮಲವಾಗಿದ್ದ ದಳ ಮಂಜರಿಗಳ ಪ್ರೇಮದಿಂದಲಿ ತಂದು ಶ್ರೀ ಹರಿಗೆ ನೇಮದಿಂದರ್ಚಿಸೆ ಪರಮಾತ್ಮನೊಳು ಜೀವ ಕಾಮಿತಾರ್ಥವನೀವ ಸದ್ಗುಣೆಗೆ ಕಾಷ್ಟವ ತಂದು ಗಂಧವ ಮಾಡಿ ಕೃಷ್ಣಗೆ ನಿಶ್ಠೆಯಿಂದ…
Transliteration
Mangala sri tulasidevige jaya mangala vrundavana devige |pa| Nodida matrake doshasamharige bedida varagala koduvalige Made vandaneyanu manujara papada gudanidaduva gunavntege||1|| Muttida matrakke muktara maduva mudadinduddharisuva muni vandyege Kottare niranu perige kalana muttalesada hage malpalige||2|| Bitti belasi tanna hecchisidavarige chittavallaba krushnana harushadali Atyantavagi ta Bavada…