Haridasa Sahitya — Vyasadasa

Mangalam sri tathi varage

ಮಂಗಳ ಶ್ರೀ ಯತಿವರಗೆ ಮಂಗಳ

Composer: Hanumesha Vitthala Dasaru · Deity: Raghavendra Teertharu · Genre: Bhakti

Kannada lyrics

ಮಂಗಳ ಶ್ರೀ ಯತಿವರಗೆ ಮಂಗಳ ಶ್ರೀ ಹರಿಸುತಗೆ ಶೋಣಿತ ಪುರಧೀಶಗೆ ಮಂಗಳ ಗುರುವರಗೆ ||pa|| ಹರಿಸರ್ವೋತ್ತಮನೆಂದು ಪರಮ ಭಕ್ತಯಲಿಂದು ಹರುಷದಿ ಶ್ರೀ ನರಹರಿಯನು ಖಂಬದಿ ತ್ವರದಲಿ ಕರೆದವಗೆ ||1|| ಪರಿಮಳ ಗ್ರಂಥವ ಮಾಡಿ ಹರಿಯ ಪಾದಕೆ ನೀಡಿ ಪರಮ ಸುಧೀಂದ್ರರ ಕರದಲಿ ಯತಿ ಆಶ್ರಮ ಪಡೆದವಗೆ ||2|| ಭಕ್ತರ ಭಾಗ್ಯನಿಧಿಗೆ ನಿತ್ಯಸುಖಾ ಪಡೆದವಗೆ ಮುಕ್ತಿಯ ದ್ವಾರವ ತೋರುವ ಗುರುರಾಘವೇಂದ್ರನಿಗೆ ||3|| ಕರುಣಾಸಾಗರನೀತಾ ಕರೆದಲ್ಲೆ ಬರುವಾತಾ ಪೊರೆಯಂದೊದರಲು ಭಕ್ತರ ಪಿಡಿಯುವ ಮೀರದೇ ಕಾಯ್ವವಗೆ ||4|| ವರಧೀರ ಹನುಮೇಶವಿಠಲನಾ ನಿಜದಾಸಾ ಸರಸದಿ ಅರ್ಚನೆಗೊಳ್ಳುವ ಮಂತ್ರಾಲಯ ಪುರವಾಸನಿಗೆ ||5||

Transliteration

Mangala sri yativarage mangala sri harisutage Sonita puradhisage mangala guruvarage ||pa|| Harisarvottamanendu parama Baktayalindu Harushadi sri narahariyanu kambadi tvaradali karedavage ||1|| Parimala granthava madi hariya padake nidi Parama sudhindrara karadali yati asrama padedavage ||2|| Baktara bagyanidhige nityasuka padedavage Muktiya dvarava toruva gururaghavendranige ||3|| Karunasagaranita…