Haridasa Sahitya — Vyasadasa
Mangalam mangalam mukyapranarayage
ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ
Composer: Purandara Dasaru · Deity: Hari · Genre: Aarathi
Kannada lyrics
ಮಂಗಳಂ ಮಂಗಳಂ ಮುಖ್ಯಪ್ರಾಣರಾಯಗೆ ||ಪ|| ಮಂಗಳಂ ಮಂಗಳಂ ಕವಿಜನಗೇಯಗೆ ||ಅ|| ಪದುಮಮಿತ್ರಪುತ್ರಗೆ ರಾಜ್ಯವ ಸಾಧಿಸಿಕೊಟ್ಟವಗೆ ಮುದದಿಂದ ವಾರಿಧಿಯ ಲಂಘಿಸಿ ಲಂಕೆಯ ಸುಟ್ಟವಗೆ ಪದುಮಾಕ್ಷಿ ಜಾನಕಿಯ ನೋಡುತ ಮೋದವ ಪಟ್ಟವಗೆ ಹದುಳದಿ ರಘುನಾಥನ ಪದದಲಿ ಶಿರವಿಟ್ಟವಗೆ ||1|| ಪುಂಡರೀಕನಯನ ಸುಪ್ರಚಂಡ ಭೀಮಗೆ ಪುಂಡರ ಶಿರಗಳ ರಣದಿ ಚೆಂಡನಾಡ್ದವಗೆ ಚಂಡಿಸಿ ಶಿವನ ವರಗಳನೆಲ್ಲ ಖಂಡಿಸಿದಾತಗೆ ಶುಂಡಾಲಪುರದರಸನೆಂದು ಮಂಡಿಸಿ ಮೆರೆದಗೆ ||2|| ದುರುಳ ಮಾಯಾವಾದಿಗಳನ್ನು ಮರುಳ ಮಾಡ್ದವಗೆ ಮುರಳೀಧರನೆ ಪರನೆಂದಾಗ ಧರೆಗೆ ತೋರಿದಗೆ ಶರಣಾಗತರನು ಪೊರೆವನೆಂದು ಬಿರುದು ಪೊತ್ತವಗೆ ಧರೆಯೊಳು ಪುರಂದರವಿಠಲನ ನೆನೆಯುವ ಕರುಣಾಸಾಗರಗೆ ||3||
Transliteration
mangalaM mangalaM muKyaprANarAyage ||pa|| mangalaM mangalaM kavijanagEyage ||a|| padumamitraputrage rAjyava sAdhisikoTTavage mudadinda vAridhiya lanGisi lankeya suTTavage padumAkShi jAnakiya nODuta mOdava paTTavage haduLadi raGunAthana padadali SiraviTTavage ||1|| punDarIkanayana supracanDa BImage punDara SiragaLa raNadi cenDanADdavage canDisi Sivana varagaLanella KanDisidAtage SunDAlapuradarasane…