Haridasa Sahitya — Vyasadasa
Mangalam jayamangalam(akruragolida trivikramage)
ಮಂಗಳಂ ಜಯಮಂಗಳಂ ಮಂಗಳಂ
Composer: Purandara Dasaru · Deity: Hari · Genre: Aarathi
Kannada lyrics
ಮಂಗಳಂ ಜಯಮಂಗಳಂ ಮಂಗಳಂ ಶುಭಮಂಗಳಂ ||pa|| ಅಕ್ರೂರಗೊಲಿದ ತ್ರಿವಿಕ್ರಮಗೆ ನಕ್ರನ ಗೆಲಿದ ಪರಾಕ್ರಮಿಗೆ ಶಕ್ರನ ಗರ್ವಪಹಾರವ ಮಾಡಿದ ಶುಕ್ರನ ಶಿಷ್ಯನ ಗೆಲಿದವಗೆ ||1|| ಗಂಗೆಯ ಪಡೆದ ಶ್ರೀರಂಗನಿಗೆ ರಂಗುಮಾಣಿಕದುಂಗುರದವಗೆ ಭೃಂಗಕುಂತಳೆಯರ ವ್ರತವನೆ ಕೆಡಿಸಿದ ಅಂಗಜನಯ್ಯ ಶುಭಾಂಗನಿಗೆ ||2|| ಧರೆಯೊಳಧಿಕ ವೆಂಕಟಾಚಲಗೆ ಸ್ಥಿರವಾಗಿ ಪುಷ್ಕರಿಣಿಲಿ ನೆಲಸಿಹಗೆ ಪರತತ್ವ ಶ್ರೀಪುರಂದರವಿಠಲಗೆ ವರವೆಂಕಟೇಶ ಶ್ರೀನಿವಾಸಗೆ ||3||
Transliteration
mangalaM jayamangalaM mangalaM SuBamangalaM ||pa|| akrUragolida trivikramagemangalaM jayamangalaM nakrana gelida parAkramige Sakrana garvapahArava mADida Sukrana SiShyana gelidavage ||1|| gangeya paDeda SrIranganige rangumANikadunguradavage BRungakuntaLeyara vratavane keDisida angajanayya SuBAnganige ||2|| dhareyoLadhika venkaTAcalage sthiravAgi puShkariNili nelasihage paratatva SrIpurandaraviThal…