Haridasa Sahitya — Vyasadasa
Mangalam jayamangalam (carisuva jaladali)
ಮಂಗಳಂ ಜಯಮಂಗಳಂ
Composer: Purandara Dasaru · Deity: Hari · Genre: Aarathi
Kannada lyrics
ಮಂಗಳಂ ಜಯಮಂಗಳಂ ||ಪ|| ಚರಿಸುವ ಜಲದಲಿ ಮತ್ಸ್ಯವತಾರನಿಗೆ ಗಿರಿಯ ಬೆನ್ನಿಲಿ ಪೊತ್ತ ಕೂರ್ಮನಿಗೆ ಧರೆಯನುದ್ಧರಿಸಿದ ವರಹವತಾರನಿಗೆ ತರಳನ ಕಾಯ್ದ ನರಸಿಂಹಗೆ ||1|| ಭೂಮಿಯ ದಾನವ ಬೇಡಿದಗೆ ಆ ಮಹಾ ಕ್ಷತ್ರಿಯರ ಗೆಲಿದವಗೆ ರಾಮಚಂದ್ರನೆಂಬ ಸ್ವಾಮಿಗೆ ಸತ್ಯ- ಭಾಮೆಯರಸ ಗೋಪಾಲಕೃಷ್ಣಗೆ ||2|| ಬತ್ತಲೆ ನಿಂತಿದ್ದ ಬೌದ್ಧನಿಗೆ ಉತ್ತಮ ಹಯವೇರಿದ ಕಲ್ಕಿಗೆ ಹತ್ತವತಾರದಿ ಭಕ್ತರ ಸಲಹುವ ಕರ್ತು ಶ್ರೀಪುರಂದರವಿಠಲನಿಗೆ ||3||
Transliteration
mangalaM jayamangalaM ||pa|| carisuva jaladali matsyavatAranige giriya bennili potta kUrmanige dhareyanuddharisida varahavatAranige taraLana kAyda narasiMhage ||1|| BUmiya dAnava bEDidage A mahA kShatriyara gelidavage rAmachandraneMba svAmige satya- BAmeyarasa gOpAlakRuShNage ||2|| battale nintidda bauddhanige uttama hayavErida kalkige hattavatAradi Baktara salahuva kartu SrIpurandaraviThalanige |…