Haridasa Sahitya — Vyasadasa

Mangalam jayamamgalam

ಮಂಗಲಂ ಜಯ

Composer: Kanakadasaru · Deity: Krishna / Govinda / Mukunda · Genre: Aarathi

Kannada lyrics

ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ | ರಥನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ | ಹರಿಯ ಮಗನ ಶಿರ ಹರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನ ಭರದಿ ಭಕ್ಶಿಸುವನ ಶಿರದಲಿ ನಟಿಸಿದ ವರಕಾಗಿನೆಲೆಯಾದಿಕೇಶವರಾಯಗೆ | ೩ |

Transliteration

Mangalam jayamamgalam||pa|| Andhakananujana kandana tandeya kondana Siradali nindavana | Chendadi padedana nandaneyalanolavindadi dharisida mukundanige | 1 | Rathavanadari surapathadali tiruguva sutanige sapavanittavana | Katiyannu tadedana satiya janini suta satiyaranalida caturanige | 2 | Hariya magana Sira haridana tandeya hiriya magana tammana pitana | Baradi bakshisuvana Siradali natisida var…