Haridasa Sahitya — Vyasadasa

Mangalam jaya mangalam

ಮಂಗಳಂ ಜಯ ಮಂಗಳಂ

Composer: Purandara Dasaru · Deity: Hari · Genre: Aarathi

Kannada lyrics

ಮಂಗಳಂ ಜಯ ಮಂಗಳಂ||pa|| ನಿಗಮವ ತಂದಾ ಮತ್ಸ್ಯಾವತಾರಗೆ ನಗವ ಬೆನ್ನಲಿ ಪೊತ್ತ ಕೂರ್ಮನಿಗೆ ಜಗವನುದ್ಧರಿಸಿದ ವರಾಹಾವತಾರಗೆ ಮಗುವಿನ ಕಾಯ್ದ ಮುದ್ದು ನರಸಿಂಹಗೆ||1|| ಭೂಮಿಯ ದಾನವ ಬೇಡಿದಗೆ ಆ ಮಹಾ ಅರಸರ ಗೆಲಿದವಗೆ ರಾಮಚಂದ್ರನೆಂಬ ಸ್ವಾಮಿಗೆ ಸತ್ಯ- ಭಾಮೆಯ ಅರಸ ಗೋಪಾಲಕೃಷ್ಣಗೆ||2|| ಬತ್ತಲೆ ನಿಂತಿಹ ಬುದ್ಧನಿಗೆ ಉತ್ತಮ ಹಯವನೇರಿದ ಕಲ್ಕಿಗೆ ಹತ್ತವತಾರದಿ ಭಕ್ತರ ಸಲಹಿದ ನಿತ್ಯ ಶ್ರೀ ಪುರಂದರವಿಠಲನಿಗೆ||3||

Transliteration

Mangalam jaya mangalam||pa|| Nigamava tanda matsyavatarage Nagava bennali potta kurmanige Jagavanuddharisida varahavatarage Maguvina kayda muddu narasimhage||1|| Bumiya danava bedidage A maha arasara gelidavage Raamachandranemba svamige satya- Bameya arasa gopalakrushnage||2|| Battale nintiha buddhanige Uttama hayavanerida kalkige Hattavataradi Baktara salahida Nitya sri purandaravithalanige||3||