Haridasa Sahitya — Vyasadasa
Mangala guru ragavendrage jaya
ಮಂಗಳ ಗುರು ರಾಘವೇಂದ್ರಗೆ ಜಯ
Composer: Jagannatha Dasaru · Deity: Vishnu · Genre: Dasara Pada
Kannada lyrics
ಮಂಗಳ ಗುರು ರಾಘವೇಂದ್ರಗೆ ಜಯ ||ಪ|| ಮಂಗಳ ಸುಜನಾಂಬುಧಿಚಂದ್ರಗೆ ||ಅ.ಪ|| ಶ್ರೀಸುಧೀಂದ್ರಕುಮಾರಗೆ ಮಂಗಳ ಭೂಸುರನುತ ಮಹಿಮಗೆ ಮಂಗಳ ದೇಶಿಕ ಕುಲವನಜಾರ್ಕಗೆ ಮಂಗಳ ಭಾಸುರ ಕೀರ್ತಿಯ ಪಡೆದವಗೆ ||೧|| ವೃಂದಾವನಭುವಿಯೊಳಗೆ ಸುರದ್ರುಮ- ದಂದದಿ ರಾಜಿಸುವಗೆ ಮಂಗಳ ಅಂಧ ಪಂಗು ಮೂಕ ಬಧಿರರ ಈಪ್ಸಿತ ಸಂದೋಹ ಸಲಿಸುವ ಮುನಿವರಗೆ ||೨|| ಭೂತಪ್ರೇತಬೇತಾಳ ಭಯವಿಪಿನ ವೀತಿಹೋತ್ರನೆನಿಪಗೆ ಮಂಗಳ ವಾತಜನುತ ಜಗನ್ನಾಥವಿಠಲನ ದೂತರ ಸಲಹುವ ದಾತನಿಗೆ||೩||
Transliteration
mangaLa guru rAGavEndrage jaya ||pa|| mangaLa sujanAnbudhicandrage ||a.pa|| SrIsudhIndrakumArage mangaLa BUsuranuta mahimage mangala dESika kulavanajArkage mangala BAsura kIrtiya paDedavage ||1|| vRundAvanaBuviyoLage suradruma- dandadi rAjisuvage mangala andha pangu mUka badhirara Ipsita sandOha salisuva munivarage ||2|| BUtaprEtabEtALa Bayavipina vItihOtranenipage mangala vAtajanuta jagannAthaviT…