Haridasa Sahitya — Vyasadasa

Maneya kaṭṭuvaruṇṭu maḍadi makkaḷuṇṭu

ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು

Composer: Gopala Dasaru · Deity: Hari · Genre: Ugabhoga

Kannada lyrics

ಮನೆಯ ಕಟ್ಟುವರುಂಟು ಮಡದಿ ಮಕ್ಕಳುಂಟು ಧನವ ಗಳಿಸುವರುಂಟು ಗಳಿಸದಿದ್ದವರುಂಟು ಧನವ ಕಟ್ಟುವರುಂಟು ದಾನ ಮಾಡುವರುಂಟು ಋಣವ ಕೊಟ್ಟವರುಂಟು ಋಣ ಮಾಡಿದವರುಂಟು ಮಣೆಗಾರತನವಿದರೊಳೆಂದಿಗೂ ಬೇಡ ಮುನಿಗಳು ಸಹಿತಾಗಿ ಮೋಸ ಹೋದರು ಇದಕೆ ಗುಣಪೂರ್ಣ ಚೆಲ್ವ ಗೋಪಾಲವಿಠ್ಠಲ ನಿನ್ನ ಗುಣ ಚಿಂತನೆಯೊಳಿಡು ಇಷ್ಟೇ ಸಾಕು

Transliteration

Maneya kaṭṭuvaruṇṭu maḍadi makkaḷuṇṭu dhanava gaḷisuvaruṇṭu gaḷisadiddavaruṇṭu dhanava kaṭṭuvaruṇṭu dāna māḍuvaruṇṭu r̥ṇava koṭṭavaruṇṭu r̥ṇa māḍidavaruṇṭu maṇegāratanavidaroḷendigū bēḍa munigaḷu sahitāgi mōsa hōdaru idake guṇapūrṇa celva gōpālaviṭhṭhala ninna guṇa cintaneyoḷiḍu iṣṭē sāku