Haridasa Sahitya — Vyasadasa
Manava janma doddadu
ಮಾನವ ಜನ್ಮ ದೊಡ್ಡದು
Composer: Purandara Dasaru · Deity: Hari · Genre: Philosophy
Kannada lyrics
ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ||ಪ|| ಕಣ್ಣು ಕೈ ಕಾಲ್ಕಿವಿ ನಾಲಗೆ ಇರಲಿಕ್ಕೆ ಮಣ್ಣುಮುಕ್ಕಿ ಮರಳಾಗುವರೆ ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು ಉಣ್ಣದೆ ಉಪವಾಸವಿರುವರೇನೋ ||೧|| ಕಾಲನವರು ಬಂದು ಕರಪಿಡೆದೆಳೆದಾಗ ತಾಳು ತಾಳೆಂದರೆ ಕೇಳುವರೆ? ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ ||೨|| ಏನು ಕಾರಣ ಯದುಪತಿಯನ್ನು ಮರೆತಿರಿ ಧನ ಧಾನ್ಯ ಸತಿ ಸುತರಿವು ನಿತ್ಯವೆ? ಇನ್ನಾದರು ಶ್ರೀ ಪುರಂದರವಿಠಲನ ಚೆನ್ನಾಗಿ ಭಜಿಸಿ ನೀವು ಸುಖಿಯಾಗಿರಯ್ಯ ||೩||
Transliteration
Manava janma doddadu ida Hani madalu bedi hucchappagalira ||pa|| Kannu kai kalkivi nalage iralikke Mannumukki maralaguvare Honnu hennigagi harinamamrutavanu Unnade upavasaviruvareno ||1|| Kalanavaru bamdu karapidedeledaga Talu talendare keluvare? Vele hogada munna dharmava galisiro Sullina samsara sulige silukabedi ||2|| Enu karana yadupatiyannu maretiri Dhana dhanya sati sutarivu nityave? Innadar…