Haridasa Sahitya — Vyasadasa
Malagu malagelo
ಮಲಗು ಮಲಗೆಲೊ
Composer: Haridasa · Deity: Krishna / Govinda / Mukunda · Genre: Jojo / Laali
Kannada lyrics
ಮಲಗು ಮಲಗೆಲೊ ಸುಮ್ಮನೆ ಸುಕುಮಾರ ಚೆಲುವ ಜೋಗುಳವ ಪಾಡುವೆ ಗೋಪಾಲ ||ಪ|| ಲಲನಾಮಣಿಯರು ಸುಲಭದಿ ನಿನ್ನನು ಕಲಭಾಷಣದಿಂದ ಸೆಳೆಯ ಬಯಸುತಿಹರೋ ||ಅ.ಪ|| ಭೋಗಿಶಯನ ಹರಿ ಈ ಜಗದೊಳಗೆ ಈಗ ಬಂದಿರುವ ಜಾಗವನರಿಯದೆ ಯೋಗಿ ಜನರು ಅನುರಾಗದಿಂದ ನಿನ್ನ ಸಾಗಿಸಲಿರುವರೊ ಕೂಗದೆ ಸುಖದಲಿ ||1|| ದುರುಳ ಶಕಟನನು ಮುರಿದ ಕೋಮಲದ ಚರಣ ಕಮಲಗಳು ಉರಿಯುತಲಿದ್ದರು ಮರೆಯಲದನು ಸುವಿನೋದವೀಯುವ ಸರಸಪದಗಳನು ಪರಿಪರಿಯರುಹುವೆನೊ ||2|| ಎನ್ನಯ ಕರಗಳು ನೋಯುತಲಿರುವುವು ಚಿನ್ಮಯ ರೂಪನೆ ನಿದ್ರೆಯ ಮಾಡೊ ದಧಿ ಪಯ ಬೆಣ್ಣೆಯ ಕೊಡುವೆ| ಪ್ರಸನ್ನ ಸುಹೃದಯದಲಿ ||3||
Transliteration
Malagu malagelo summane sukumara Celuva jogulava paduve gopala ||pa|| Lalanamaniyaru sulabadi ninnanu Kalabashanadinda seleya bayasutiharo ||a.pa|| Bogisayana hari I jagadolage Iga bandiruva jagavanariyade Yogi janaru anuragadimnda ninna Sagisaliruvaro kugade sukadali ||1|| Durula sakatananu murida komalada Carana kamalagalu uriyutaliddaru Mareyaladanu suvinodaviyuva Sarasapadagalanu paripariyaruh…