Haridasa Sahitya — Vyasadasa
Mahime saalade
ಮಹಿಮೆ ಸಾಲದೆ,
Composer: Vyasarajaru · Deity: Sripadarajaru · Genre: Bhakti
Kannada lyrics
ಮಹಿಮೆ ಸಾಲದೆ, ಇಷ್ಟೇ ಮಹಿಮೆ ಸಾಲದೆ ||pa|| ಅಹಿಶಯನನ ಒಲುಮೆಯಿಂದಮಹಿಯೊಳೆಮ್ಮ ಶ್ರೀಪಾದರಾಯರ ||a.pa|| ಮುತ್ತಿನ ಕವಚ ಮೇಲ್ಕುಲಾವಿರತ್ನ ಕೆತ್ತಿದ ಕರ್ಣಕುಂಡಲ ಕಸ್ತೂರಿ ತಿಲಕ ಶ್ರೀಗಂಧ ಲೇಪನವಿಸ್ತರದಿಂದ ಮೆರೆದು ಬರುವ ||1|| ವಿಪ್ರ ಹತ್ಯ ದೋಷ ಬರಲುಕ್ಷಿಪ್ರ ಶಂಖೋದಕದಿ ಕಳೆಯೆ ಅಪ್ರಬುದ್ಧರು ದೂಷಿಸೆ ಗೇರೆಣ್ಣೆಕಪ್ಪು ವಸನ ಶುಭ್ರಮಾಡಿದ||2|| ಹರಿಗೆ ಸಮರ್ಪಿಸಿದ ನಾನಾಪರಿಯ ಶಾಕಗಳನು ಭುಂಜಿಸೆ ನರರು ನಗಲು ಶ್ರೀಶಕೃಷ್ಣನಕರುಣದಿಂದಲಿ ಹಸಿಯ ತೋರಿದ||3||
Transliteration
Mahime saalade | ishte mahime saalade || pa || Ahishayanana olumeyinda mahiyolemma shreepaadaraajara || a.pa. || Muttina kavaca mel turaayi navaratna kettida karna kundala | kastoori tilaka shreegandha lepana vistaaradinda meredu baruva || 1 || Viprage brahmahatya dosha baralu kshipra shankhodakadi kaleye | apra baddharu doshise gerenne kappu vasana hasana maadida || 2 || Harige samarpisida naanaa…