Haridasa Sahitya — Vyasadasa

Mahadadi deva namo

ಮಹಾದಾದಿದೇವ ನಮೋ

Composer: Purandara Dasaru · Deity: Narasimha · Genre: Bhakti

Kannada lyrics

ಮಹಾದಾದಿದೇವ ನಮೋ ಮಹಾಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನರಸಿಂಹ || .ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು || ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ || ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ || ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ ಬಗೆದ ಕಡುಗಲಿ ನಾರಸಿಂಹ|| ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಗರೆಯಲು ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸುವ ಪುರಂದರವಿಠಲ ನಾರಸಿಂಹ ||

Transliteration

Mahadadi deva namo || mahadadi deva namo || pa || Mahamahimane namo |prahladavarada ahobala narasimha||a|| Dharanigubbasavage tarapathavu naduge | Suraru kangettode nabava bittu | Tarugirigalallade saradhigalu kudidukke | Uriyanuguluta udbaviside narasimha | 1 | Sidilante garjisuta kudiyanalage caci | Adigadige lamgisuta kadukopadinda | Mudipididu rakkasana kedahi nakadindotti | Kadu udara bagede…