Haridasa Sahitya — Vyasadasa
Madi suladi
ಮಡಿ ಸುಳಾದಿ
Composer: Vijaya Dasaru · Deity: Hari · Genre: Sulaadi
Kannada lyrics
ಮಡಿ ಸುಳಾದಿ ಧ್ರುವತಾಳ ಮಡಿ ಮಾಡುವದೊ ಮಾನವ ನಡತಿ ನುಡತಿ ತಿಳಿದೂ ಬಿಡದೆ ಪ್ರತಿದಿನ ಮಿರ್ಮಲದಿ ಮಡಿ, ನೀರೊಳಗೆ ಒಗೆದು ಮಡಿಸಿ ಬಗೆಬಗೆಯಿಂದ ಮಡಕಿ ಹಾಕಿಟ್ಟರೆ ಮಡಿಯಲ್ಲ | ಧೃಢದಲಿ ತಿಳಿದುನೋಡಿ ಮಡಿ ನೀರೊಳಗೆ ಇಲ್ಲ | ಮಡಿ ದೇಶದೊಳಗಿಲ್ಲ ಮಡಿ ವಸನದೊಳಗಿಲ್ಲ | ಮಡಿ ನಭದಲ್ಲಿ ಇಲ್ಲ ಮಡಿ ಮಾಡೊ ಉಪಾಯವ | ವೊಡನೆ ತನ್ನಲಿ ಉಂಟು ಪೊಡವಿ ತಿರುಗಲು ಸಲ್ಲ | ಅಡಿಗಡಿಗೆ ದಣಿವುದಲ್ಲ ಅಡಿಗಳಿಟ್ಟು ನೋಡಿ | ನಡೆದರೆ ಮಡಿಯಲ್ಲ ಮಡಿಯಾಪ್ಪನೆಂದು ಉಡಿಗೆ ಮುದುರಿಕೊಂಡು ಅಡಿಅಡಿಗ್‌ಹಾರಿದರೆ ಮಡಿಯಾಗುವುದೇನೋ | ಕಡು ಮುದ್ದು ಮೋಹನ ವಿಜಯ ವಿಟ್ಠಲನ್ನ | ಅಡಿಗೆರಗದವನ ಮಡಿಯಾತಕ್ಕೆ ಒಪ್ಪದೊ || ೧ || ಮಟ್ಟತಾಳ ಕಾಮಕ್ರೋಧದಲಿ ತಿರುಗಲು…
Transliteration
Dhruva tala Madi maduvado manava nadati nudati tilidu Bidade pratidina mirmaladi madi, nirolage ogedu Madisi bagebageyinda madaki hakittare madiyalla | Dhrudhadali tilidunodi madi nirolage illa | Madi desadolagilla madi vasanadolagilla | Madi nabadalli illa madi mado upayava | Vodane tannali untu podavi tirugalu salla | Adigadige danivudalla adigalittu nodi | Nadedare madiyalla madiyappanendu udig…