Haridasa Sahitya — Vyasadasa

Madi madi yendu

ಮಡಿ ಮಡಿ ಮಡಿಯೆಂದು

Composer: Purandara Dasaru · Deity: Hari · Genre: Philosophy

Kannada lyrics

ಮಡಿ ಮಡಿ ಮಡಿಯೆಂದು ಅಡಿಗಡಿಗಹಾರುವೆ ಮಡಿ ಮಾಡು ಬಗೆ ಬೇರುಂಟು ಪೊಡವಿ ಪಾಲಕನ ಪಾದ ಧ್ಯಾನವನು ಬಿಡದೆ ಮಾಡುವುದದು ಮಡಿಯು ೧: ಬಟ್ಟೆಯ ನೀರೊಳಗದ್ದಿ ಒಣಗಿಸಿ ಉಟ್ಟು ಕೊಂಡರೆ ಅದು ಮಡಿಯಲ್ಲ ಹೊಟ್ಟೆಯೊಳಗಿನ ಕಾಮ ಕ್ರೋಧ ಮದ ಮತ್ಸರ ಬಿಟ್ಟು ನಡೆದರೆ ಅದು ಮಡಿಯು ೨: ದಶಮಿ ದ್ವಾದಶಿ ಪುಣ್ಯ ದಿನದಲಿ ವಸುದೇವ ಸುತನನು ಪೂಜಿಸದೆ ದೋಷಕಂಜದೆ ಪರರನ್ನ ಭುಂಜಿಸಿ ಯಮ ಪಾಶಕೆ ಸಿಲುಕುವುದದು ಮಡಿಯೆ ೩: ಹಸಿದು ಭೂಸುರರು ಮಧ್ಯಾಹ್ನ ಕಾಲಕೆ ಕುಸಿದು ಮನಗೆ ಬಳಲುತ ಬಂದರೆ ಮಸಣಿಗೊಂದು ಗತಿಯಿಲ್ಲವೆಂದು ತಾ ಹಸನಾಗಿ ಉಂಬೋದು ಹೊಲೆ ಮಡಿಯು ೪: ಇಚ್ಚೆಯಿಂದ ಮಲ ಮೂತ್ರ ಶರೀರವ ನೆಚ್ಚಿ ತೊಳೆಯಲು ಅದು ಮಡಿಯೆ ಅಚ್ಯುತಾನಂತನ ನಾಮವ ನೆನೆದು ಸಂಚಿತ…

Transliteration

Madi madi yendu adigadigharuve Madi Maaduva Bage Beruntu Podavi Paalakana Paadadhyaanavanu Bidade Maaduvudadu Madiyu|| Batteya Neerolagaddi Onagisi Uttukondare Adhu Madiyalla Hotteyolagina Kama Krodha Mada Matsara Bittu Nadedare Adhu Madiyu|| Dashami Dwadashi Punya Dinadali Vasudevasutananu Pujisade Doshakanjade Pararanna Bhunjisi Yamapashake Silukuvudadu Madiye|| Hasidu Bhusuraru Madhyanha Kaalak…