Haridasa Sahitya — Vyasadasa

Madhyanguli mele manisaravittinnu

ಮಧ್ಯಾಂಗುಲಿ ಮೇಲೆ ಮಣಿಸರವಿಟ್ಟಿನ್ನು

Composer: Purandara Dasaru · Deity: Hari · Genre: Ugabhoga

Kannada lyrics

ಮಧ್ಯಾಂಗುಲಿ ಮೇಲೆ ಮಣಿಸರವಿಟ್ಟಿನ್ನು ಬದ್ಧ ಅಂಗುಟಾಗ್ರ ಎಣಿಸಬೇಕು ಕಿರಿ ಅಂಗುಲಿ ಪಂಚ ಭೋಗಿಸಿ ಇರಬೇಕು ಭದ್ರವಾಗಿ ನಿಲ್ಲಿಸಿ ನೀರು ಸೋರದೆ ಗಾಯತ್ರಿ ಬುದ್ಧಿಪೂರ್ವಕದಿಂದ ಗೆಯ್ಯುತಲಿರಬೇಕು ಮುದ್ದುಮೂರುತಿ ನಮ್ಮ ಪುರಂದರವಿಠಲನ ಯವದೆಂದು ನೋಡುವಾ ಬಗೆ ಕಾಣಬೇಕು ||

Transliteration

Madhyanguli mele manisaravittinnu Baddha angutagra enisabeku Kiri anguli panca bogisi irabeku Badravagi nillisi niru sorade gayatri Buddhipurvakadinda geyyutalirabeku Muddumuruti namma purandaravithalana Yavadendu noduva bage kanabeku ||