Haridasa Sahitya — Vyasadasa

Madhwacharyaru suladhi(By Purandara dasaru)

ಧ್ರುವತಾಳ

Composer: Purandara Dasaru · Deity: Sri Madhwacharyaru · Genre: Sulaadi

Kannada lyrics

ಧ್ರುವತಾಳ ಒಬ್ಬ ಆಚಾರ್ಯನು ದೈವವೇ ಇಲ್ಲವೆಂಬ | ಒಬ್ಬ ಆಚಾರ್ಯನು ದೈವಕೆ ಎಂಟು ಗುಣವೆಂಬ | ಒಬ್ಬ ಆಚಾರ್ಯನು ನಿರ್ಗುಣ ನಿರಾಕಾರ ನಿರೂಹನೆಂದು- ತಾನೆ ದೈವವೆಂಬ | ಇವರೊಬ್ಬರೂ ವೇದಾರ್ಥವರಿತೂ ಅರಿಯರು | ಇವರೊಬ್ಬರೂ ಶಾಸ್ತ್ರಾರ್ಥವರಿತೂ ಅರಿಯರು | ಒಬ್ಬ ಮಧ್ವಾಚಾರ್ಯರೆ ಪುರಂದರ ವಿಠಲನೊಬ್ಬನೆ ಎಂದು ತೋರಿ ಕೊಟ್ಟವರಾಗಿ ||1|| ಮಟ್ಟ ತಾಳ ಹರಿಪರ ದೇವತೆ ಎಂಬ ಜ್ಞಾನವೇ ಜ್ಞಾನ | ಹರಿಯಡಿಗಳನೈದುವ ಮುಕುತಿಯೇ ಮುಕುತಿ | ಹರಿ ವಿರಹಿತ ಜ್ಞಾನ ಮಿಥ್ಯಾ ಜ್ಞಾನ | ಹರಿ ವಿರಹಿತ ಮುಕುತಿ ಮಾತಿನ ಮುಕುತಿ | ಹರಿಪರ ಸಿರಿ ಮಧ್ವಾಚಾರ್ಯರೇ ಗುರುಗಳು | ತ್ರೈಲೋಕ್ಯಕೆ ಪುರಂದರ ವಿಠಲನೇ ದೈವವು ||2|| ರೂಪಕತಾಳ ಸುರತರುವಿರುತಿರೆ ಎಲವ…

Transliteration

dhruvatALa obba AcAryanu daivavE illaveMba | obba AcAryanu daivake enTu guNaveMba | obba AcAryanu nirguNa nirAkAra nirUhanendu- tAne daivaveMba | ivarobbarU vEdArthavaritU ariyaru | ivarobbarU SAstrArthavaritU ariyaru | obba madhvAcAryare purandara viThalanobbane eMdu tOri koTTavarAgi ||1|| maTTa tALa haripara dEvate eMba gnanave gnana | hariyaDigaLanaiduva mukutiyE mukuti | hari virahita gnana mi…