Haridasa Sahitya — Vyasadasa

Madhvarayara charite kelalu

ಮಧ್ವರಾಯರ ಚರಿತೆ ಕೇಳಲು

Composer: Vidyaprasanna Teertharu · Deity: Sri Madhwacharyaru · Genre: Bhakti

Kannada lyrics

ಮಧ್ವರಾಯರ ಚರಿತೆ ಕೇಳಲು ಶುದ್ಧವಾಯಿತು ಜನತೆ ||pa|| ತಿದ್ದಿತೆಲ್ಲರ ನಡತೆ ಸುಲಭದಿ ಲಬ್ಧವಾಯಿತು ಘನತೆ ||a.pa|| ಉತ್ತಮ ದಿವಿಜರ ಸತ್ಸಭೆಗಳಲಿ ನಿತ್ಯ ಪಾಡುವ ಕಥೆ ಮರ್ತ್ಯಲೋಕದ ಮದ ಮತ್ಸರ ರೋಗಕೆ ಪಥ್ಯಮಾಡುವವರಿಗೆ ಉತ್ತಮವೀ ಕಥೆ ||1|| ಇಲ್ಲಿಯ ಜೀವನ ಅಲ್ಲಿಗೆ ಸಾಧನ ಎಲ್ಲಿಯು ಭೇದವ ತೋರಿದರು ಕ್ಷುಲ್ಲಕ ಮತಗಳ ಬೆಲ್ಲದ ವಚನವು ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ ||2|| ಹರಿ ಗುರು ಕೃಪೆಯಿದು ಮರುದಂಶರ ಮೈ ಮರೆಸುವ ಚರಿತೆಯು ಹರಿದುದು ಶ್ರವಣದೊಳ ದುರಿತವು ತೊಲಗಿತು ಪರಮ ಪ್ರಸನ್ನನ ಪರಮ ಪದದ ರುಚಿಯರಿತರು ಸುಜನರು ||3||

Transliteration

Madhvarayara carite kelalu Suddhavayitu janate ||pa|| Tidditellara nadate sulabadi Labdhavayitu Ganate ||a.pa|| Uttama divijara satsabegalali Nitya paduva kathe Martyalokada mada matsara rogake Pathyamaduvavarige uttamavi kathe ||1|| Illiya jivana allige sadhana Elliyu bedava toridaru Kshullaka matagala bellada vacanavu Salladayitu balu balla mahatma sri ||2|| Hari guru krupeyidu marudamsara mai M…