Haridasa Sahitya — Vyasadasa

Madhvamuniye enna hrutkumuda

ಮಧ್ವಮುನಿಯೇ ಎನ್ನ ಹೃತ್ಕುಮುದ

Composer: Vijaya Dasaru · Deity: Sri Madhwacharyaru · Genre: Bhakti

Kannada lyrics

ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ||pa|| ಅದ್ವೈತಮತಾರಣ್ಯ ದಹನ ಗುಣಸಾಂದ್ರ ||a.pa|| ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ ಒಂದೇ ಪ್ರಕಾರ ಸಂಚgಣೆಯಿಂದ ಒಂದೊಂದು ಕರ್ಮಗಳನರಸಿ ನೋಡಲು ಅದ- ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ ||1|| ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು ನೀರಿನಿಂದಲಿ ಕೊಡಲು ಬಪ್ಪುದೇನೊ ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ||2|| ಹರಿಸಿರಿಗೆ ಎರಗುವ ಸತ್ವ ಶರೀರನೆ ನಿರುತ ಎನ್ನೊಳಗಿಪ್ಪ ಮೂಲಗುರುವೆ ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನ ಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು ||3||

Transliteration

Madhvamuniye enna hrutkumuda chandra ||pa|| Advaitamataranya dahana gunasandra ||a.pa|| Nonde embatnalku lakshayonigalalli Onde prakara sancagneyinda Ondondu karmagalanarasi nodalu ada- Rinda bavabdhige bamdupayava kane ||1|| Niru calapalakasi aralittu heppu Nirinindali kodalu bappudeno Maruti ninna krupe padeyadale ulidavara Karunyavagalu mokshasadhanavilla||2|| Harisirige eraguva satva sarirane…