Haridasa Sahitya — Vyasadasa

Madhvamatava pondadavana

ಮಧ್ವಮತವ ಪೊಂದದವನ

Composer: Vijaya Dasaru · Deity: Sri Madhwacharyaru · Genre: Bhakti

Kannada lyrics

ಮಧ್ವಮತವ ಪೊಂದದವನ ಭಕುತಿಯಾತಕೆ ||pa|| ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆ||a.pa|| ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ ||1|| ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನ ವ್ಯಾತಕೆ ||2|| ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ | ನಿಂದೆಗಳು ಮಾಡುತಿಹನಾಚಾರವ್ಯಾತಕೆ ||3|| ಗುರೂಪದೇಶವಿಲ್ಲದಂಥ ಮಂತ್ರವ್ಯ…

Transliteration

Madhvamatava pondadavana bakutiyatake ||pa|| Udhrvapundra tiddadavana karmavyatake||a.pa|| Danavannu madadavana dravyavyatake | Snanavannu madadavana maunavyatake | Maniniyu illadavana baduku yatake | Dhyanavannu ariyadavana puje yatake ||1|| Vamsavannuddharisadantha maganu yatake | Himseyannu padisuvantha arasu yatake || Samsaravanu olladantha satiyu yatake | Kamsariyanu tiliyadantha gnana vyatak…