Haridasa Sahitya — Vyasadasa

Madhva muniye namma guru madhva muniye

ಮಧ್ವಮುನಿಯೇ ನಮ್ಮ ಗುರು ಮಧ್ವಮುನಿಯೇ

Composer: Purandara Dasaru · Deity: Sri Madhwacharyaru · Genre: Bhakti

Kannada lyrics

ಮಧ್ವಮುನಿಯೇ ನಮ್ಮ ಗುರು ಮಧ್ವಮುನಿಯೇ ||ಪ || ಮಧ್ವಮುನಿ ನಮ್ಮನ್ನೆಲ್ಲ ಉದ್ಧರಿಸುವ ಕಾಣಿರೋ ||ಅ || ಹಿಂದೆ ಹನುಮಂತನಾಗಿ ಬಂದು ರಾಮರ ಪಾದಾರ- ವಿಂದವ ಸೇವಿಸುತ ಆನಂದದಿಂದ ಶೋಭಿಸಿದ || ಏಣಾಂಕ ವಂಶಾಬ್ಧಿಸೋಮ ಕ್ಷೋಣಿಪಾಲಕರ ಶಿರೋ- ಮಾಣಿಕ್ಯವಾಗಿ ಹರಿಗೆ ಪ್ರಾಣನೆಂದೆನಿಸಿದ || ಕಟ್ಟಕಡೆಯಲಿ ಯೋಗಿ ದಿಟ್ಟನಾಗಿ ಪುರಂದರ ವಿಟ್ಠಲ ವೇದವ್ಯಾಸರ ಪೆಟ್ಟಿಗೆ ಮುಂದೊಪ್ಪುತಿಹ ||

Transliteration

Madhva muniye namma guru madhva muniye Madhva muni nammannella uddharisuva kaniro Hinde hanumantanagi bandu ramara padara vindava sevisuta Anandadinda shobhisida enanga vamshabdhi soma ksoni palakara shiro manikyavagi harige prananedenisida katta kadeyali yoga dittanagi purandara vittala veda vyasara pettige mundopputiha