Haridasa Sahitya — Vyasadasa
Madhukara vrutti ennadu adu balu
ಮಧುಕರ ವೃತ್ತಿ ಎನ್ನದು ಅದು ಬಲು
Composer: Purandara Dasaru · Deity: Hari · Genre: Philosophy
Kannada lyrics
ಮಧುಕರ ವೃತ್ತಿ ಎನ್ನದು ಅದು ಬಲು ಚೆನ್ನದು || ಪಲ್ಲವಿ || ಪದುಮನಾಭನ ಪಾದಪದುಮ ಮಧುಪವೆಂಬ || ಅನು ಪಲ್ಲವಿ || ಕಾಲಿಗೆ ಗೆಜ್ಜೆ ಕಟ್ಟಿ ನೀಲ ವರ್ಣನ ಗುಣ ಆಲಾಪಿಸುತ್ತ ಬಲು ಓಲಗ ಮಾಡುವಂಥ || ೧ || ರಂಗನಾಥನ ಗುಣ ಹಿಂಗದೆ ಪಾಡುತ್ತ ಶೃಂಗಾರ ನೋಡುತ್ತಾ ಕಂಗಳಾನಂದವೆಂಬ || ೨ || ಇಂದಿರಾಪತಿ ಪುರಂದರವಿಠಲನಲ್ಲಿ ಚೆಂದದ ಭಕ್ತಿಯಿಂದಾನಂದವ ಪಡುವಂಥ || ೩ ||
Transliteration
Madhukara vrutti ennadu adu balu cennadu || pallavi || Padumanabana padapaduma madhupavemba || anu pallavi || Kalige gejje katti nila varnana guna Alapisutta balu olaga maduvantha || 1 || Ranganathana guna himgade padutta Srungara nodutta kamgalanamdavemba || 2 || Indirapati purandaravithalanalli Cemdada baktiyindanandava paduvantha || 3 ||