Haridasa Sahitya — Vyasadasa

Ma maje bapure balire hanumant

ಮಾ ಮಝೆ ಭಾಪುರೇ ಭಳಿರೇ

Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti

Kannada lyrics

ಮಾ ಮಝೆ ಭಾಪುರೇ ಭಳಿರೇ ಹನುಮಂತ ಪ ರಾಮಪದ ಸೇವಿಪ ವೀರ ಹನುಮಂತ ಅ.ಪ ಹುಟ್ಟುತಲೇ ಹೊನ್ನ ಕಚ್ಚುಟವ ಕುಂಡಲವೆರಿಸಿ ನಿಷ್ಠೆಯಲಿ ರಘುಪತಿಯ ಪಾದವನೇ ಕಂಡು ಧಿಟ್ಟ ಹರಿದಾಡಿ ಮನಮುಟ್ಟಿ ಪೂಜಿಸಲಜನ ಪಟ್ಟಕನುವಾದ ಸಿರಿವಂತ ಹನುಮಂತ ೧ ಅಂಬರಕೆ ಪುಟಿನೆಗೆದು ಅಂಬುಧಿಯ ನೆರೆ ದಾಟಿ ಕುಂಭಿಣಿಯ ಮಗಳಿಗುಂಗುರವಿತ್ತೆ ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆ ಗಂಭೀರ ವೀರಾದಿವೀರ ಹನುಮಂತ ೨ ಅತಿ ದುರುಳ ರಕ್ಕಸನು ರಥದ ಮೇಲಿರಲು ರಘುಪತಿಯು ಪದಚರಿಯಾಗಿ ನಿಂತಿರಲು ಪೃಥಿವಿ ಗಗನಕೆ ಬೆಳೆದು ರಥವಾದೆ ಒಡೆಯನಿಗೆ ಅತಿ ಭಯಂಕರ ಸತ್ಯವಂತ ಹನುಮಂತ ೩ ಒಡೆಯ ಉಣಕರೆಯಲಂದಡಿಗಡಿಗೆ ಕೈ ಮುಗಿದು ದೃಡ ಭಕುತಿಯಿಂದ ಮೌನದಲಿ ಕುಳಿತು ಎಡೆಯ ಕೊಂಡೊದ್ದೋಡ…

Transliteration

Ma maje bapure balire hanumanta ||pa|| Ramapada sevipa vira hanumanta ||a.pa|| Huttutale honna kaccutava kundalaverisi Nishtheyali ragupatiya padavane kandu Dhitta haridadi manamutti pujisalajana Pattakanuvada sirivanta hanumanta 1 Ambarake putinegedu ambudhiya nere dati Kumbiniya magaligunguravitte Bembidade lankeyanu sambramadi sakagitte Gambira viradivira hanumanta 2 Ati durula rakkasanu rathad…