Haridasa Sahitya — Vyasadasa
Lokabaritano ranganeka charitano
ಲೋಕ ಭರಿತನೋ ರಂಗಾನೇಕ
Composer: Vadirajaru · Deity: Krishna / Govinda / Mukunda · Genre: Bhakti
Kannada lyrics
ಲೋಕ ಭರಿತನೋ ರಂಗಾನೇಕ ಚರಿತನೊ ||ಪ|| ಕಾಕು ಜನರ ತರಿದು ತನ್ನೇಕಾಂತ ಭಕ್ತರ ಪೊರೆವ ಕೃಷ್ಣ ||ಅ.ಪ|| ರಾಜಸೂಯ ಯಾಗದಲ್ಲಿ ರಾಜರಾಜರಿರಲು ವಸು- ದೇವಸುತನು ಈತನೆ ಸಭಾಪೂಜೆಗರ್ಹನೆನಿಸಿದಾತ||1|| ಮಿಕ್ಕ ನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆ ತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ||2|| ಉತ್ತರೆಯ ಗರ್ಭದಲ್ಲಿ ಸುತ್ತುಮುತ್ತಿದ ಅಸ್ತ್ರವನ್ನು ಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ||3|| ಜ್ಞಾನಶೂನ್ಯನಾಗಿ ಸೊಕ್ಕಿ ನಾನೇ ವಾಸುದೇವನೆಂದ ದೀನ ಪೌಂಡ್ರಕನ ಶಿರವ ಜಾಣರಾಯ ಖಂಡಿಸಿ ಮೆರೆದ||4|| ತನ್ನ ಸೇವಕಜನರ ಪೊರೆದು ಉನ್ನತ ಉಡುಪಿಯಲ್ಲಿ ನಿಂತು ಘನ್ನ ಮಹಿಮೆಯಿಂದ ಮೆರೆವ ಪ್ರಸನ್ನ ಹಯವದನನ ಕೃಷ್ಣ…
Transliteration
Lokabaritano ranganeka charitano ||pa|| Kakujanara muridu tanna ekanta Baktara poreva krushna ||a.pa|| Rajasuya yagadalli rajarajariralu dharma- Rajasutanu itane sarva pujegarhanenisidata ||1|| Mikka nrupara jaridu amita vikrama yaduvarane tanage Takka ramananendu rukmini ukki maleyikkidalaga ||2|| J~janasunyanagi sokki tane vasudevanenalu Hina paundrakana Sirava janaraya taridanaga ||3|| Uttareya…