Haridasa Sahitya — Vyasadasa
Linga ennanta ranga
ಲಿಂಗ ರಾಮಲಿಂಗ ಎನ್ನಂತರಂಗ
Composer: Vijaya Dasaru · Deity: Shiva / Rudra Devaru · Genre: Bhakti
Kannada lyrics
ಲಿಂಗ ರಾಮಲಿಂಗ ಎನ್ನಂತರಂಗ ಮಂಗಳಾಂಗನೆ ಸರ್ವೋತ್ತುಂಗನೇ ||ಪ|| ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ ಘನ ವಿದ್ಯಾತುರಗೆ ಮಂತ್ರ ಕಲಾಪವೇ? ಧನಪತಿಯ ಸಖಗೆ ಕೈಕಾಣಿಕೆಯೇ ಮನೆ ರಜತ ಪರ್ವತಗೆ ಫಣಿಯ ಆಭರಣವೇ ಮನೋ ನಿಯಾಮಕಗೆ ಎನ್ನ ಬಿನ್ನಹವೇ ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೇ ಗೌರಿಯ ರಮಣಗೆ ಈ ಸ್ತ್ರೋತ್ರವೇ ವೀರ ರಾಘವ ವಿಜಯ ವಿಠಲನ ನಿಜ ಹಸ್ತ ವಾರಿಜ ದಳದಿಂದ ಉದ್ಭವಿಸಿದ ||
Transliteration
linga ennanta ranga | ennanta ranga | mangalangane sarvottama rama linga | mandakini dharage ganganbu majjanave |chandramaulige gandha kusuma darpanaye indu ravi netranige karpuradaratiye kandarpajanakage migilapekshaye | 1 | ganavidya turanige mantrasallapave | ganapatiya sakage kaiyya kanikeye | manarajata parvatage paniyabaranave | manoniyamakage enna binnapave | 2 | vairagyanidhige i vishaya p…