Haridasa Sahitya — Vyasadasa
Lalisidhalu magana
ಲಾಲಿಸಿದಳು ಮಗನ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಲಾಲಿಸಿದಳು ಮಗನ ಯಶೋದೆ ಲಾಲಿಸಿದಳು ಮಗನ ||ಪ|| ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||೧|| ಬಾಲಕನೆ ಕೆನೆ ಹಾಲು ಮೊಸರನೀವೇ ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು ||೨|| ಮುಗುಳುನಗೆಯಿಂದ ಮುದ್ದು ತಾತಾರೆಂದು ಜಗದೊಡೆಯನೇ ಶ್ರೀಪುರಂದರವಿಠಲನ ||೩||
Transliteration
Lalisidhalu Magana yashoda lalisidhalu magana Aralele magayi beraligunguravittu Taralana maisiri taruni noduta higgi |1| Balakage kene halu mosara nidi Lileyindali tola mele malagendu |2| Mugulu nageyinda mudduta tarendu Jagadodeyana shriPurandara vitthalana |3|