Haridasa Sahitya — Vyasadasa
Lali pavana charana lali agaharana
ಲಾಲಿ ಪಾವನ ಚರಣ ಲಾಲಿ ಅಘಹರಣ
Composer: Kanakadasaru · Deity: Hari · Genre: Jojo / Laali
Kannada lyrics
ಲಾಲಿ ಪಾವನ ಚರಣ ಲಾಲಿ ಅಘಹರಣ ಲಾಲಿ ವೆಂಕಟರಮಣ ಲಲಿತ ಕಲ್ಯಾಣ ।।ಪ॥ ವನಜಾಕ್ಷ ಮಾಧವ ವಸುದೇವ ತನಯ ಸನಕಾದಿ ಮುನಿವಂದ್ಯ ಸಾಧುಜನಪ್ರಿಯ ಇನಕೋಟಿಶತತೇಜ ಮುನಿಕಲ್ಪ ಭೂಜ ಕನಕಾದ್ರಿ ನಿಲಯ ವೆಂಕಟರಾಯ ಜಜೀಯ ।।೧।। ಜಗದೇಕನಾಯಕ ಜಲಜದಳನೇತ್ರ ಖಗರಾಜ ವಾಹನ ಕಲ್ಯಾಣ ಚರಿತ ಸಗರತನಯಾರ್ಚಿತ ಸನಕಾದಿ ವಿನುತ ರಘುವಂಶಕುತಿಲಕ ರಮಣೀಯಗಾತ್ರ ।।೨।। ನಂದಗೋಪ ಕುಮಾರ ನವನೀತ ಚೋರ ಮಂದಾಕಿನೀ ಜನಕ ಮೋಹನಾಕಾರ ಇಂದುಧರಸತಿ ವಿನುತ ವಿಶ್ವಸಂಚಾರ ನಂದಗೋವಿಂದ ಮುಚುಕುಂದ ನುತಸಾರ ।।೩।। ಪಕ್ಷಿವಾಹನ ವಿಷ್ಣುಪಾಹಿ ಪರಮೇಶ ರಕ್ಷ ಕೌಸ್ತುಭಭೂಷ ವೈಕುಂಠವಾಸ ಅಕ್ಷಯ ಫಲದಾಟ ಅಖಿಳ ಲೋಕೇಶ ಲಕ್ಷಣ ಪರಿಪೂರ್ಣ ಲಕ್ಷ್ಮಿಪ್ರಾಣೇಶ ।।೪।। ನರಮೃಗಾಕಾರಿ ಹಿರಣ್…
Transliteration
Lali pavana charana lali agaharana Lali venkataramana lalita kalyana ||pa|| Vanajaksha madhava vasudeva tanaya Sanakadi munivamdya sadhujanapriya Inakotisatateja munikalpa buja Kanakadri nilaya vemkataraya jajiya ||1|| Jagadekanayaka jalajadalanetra Kagaraja vahana kalyana carita Sagaratanayarchita sanakadi vinuta Raguvamsakutilaka ramaniyagatra ||2|| Nandagopa kumara navanita cora Mandakini janak…