Haridasa Sahitya — Vyasadasa
Kusina kandira suprahladana
ಕೂಸಿನ ಕಂಡೀರಾ –
Composer: Haridasa · Deity: Raghavendra Teertharu · Genre: Dasara Pada
Kannada lyrics
ಕೂಸಿನ ಕಂಡೀರಾ – ಸುಪ್ರಹ್ಲಾದನ ಕಂಡೀರಾ || ಪ || ರಾಕ್ಷಸ ಕುಲದಲಿ ಜನಿಸಿತು ಕೂಸು ರಾಧಾಕೃಷ್ಣನ ಭಜಿಸಿತು ಕೂಸು ರಾಗದ್ವೇಷಗಳ ಬಿಟ್ಟಿತು ಕೂಸು ರಾಮನ ಪಾದವ ನೆನೆಯುವ ಕೂಸು || ೧ || ಘನಹರಿ ಕಂಭದಿ ತೋರಿತು ಕೂಸು ಗಳಿಸಿತು ಕೃಷ್ಣನ ಪ್ರೇಮವ ಕೂಸು ಘನಮಂತ್ರಾಲಯದಿ ವಾಸಿಪ ಕೂಸು ವೇಣುಗೋಪಾಲನ ಪ್ರೀತಿಯ ಕೂಸು || ೨ || ಪ್ರಸಿಧ್ಧ ವ್ಯಾಸರಾಯರೆಂಬೊ ಕೂಸು ಪ್ರವೀಣ ವಿದ್ಯೆಯೊಳೆನಿಸಿದ ಕೂಸು ಪ್ರಹ್ಲಾದನೆಂಬೊ ಆಹ್ಲಾದ ಕೂಸು ಪ್ರಸನ್ನ ಮಧ್ವೇಶವಿಠ್ಠಲನ ಕೂಸು || ೩ ||
Transliteration
Kusina kandira – suprahladana kandira || pa || Rakshasa kuladali janisitu kusu Radhakrushnana Bajisitu kusu Ragadveshagala bittitu kusu Ramana padava neneyuva kusu || 1 || Ganahari kambadi toritu kusu Galisitu krushnana premava kusu Ganamantralayadi vasipa kusu Venugopalana pritiya kusu || 2 || Prasidhdha vyasarayarembo kusu Pravina vidyeyolenisida kusu Prahladanembo ahlada kusu Prasanna madhvesav…