Haridasa Sahitya — Vyasadasa
Kusina kandira
ಕೂಸಿನ ಕಂಡೀರ್ಯಾ
Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti
Kannada lyrics
ಕೂಸಿನ ಕಂಡೀರ್ಯಾ , ಗುರು ಮುಖ್ಯಪ್ರಾಣನ ಕಂಡೀರ್ಯಾ ||ಪ|| ಬಾಲನ ಕಂಡೀರ್ಯಾ ಬಲವಂತನ ಕಂಡೀರ್ಯಾ ||ಅ.ಪ || ಅಂಜನೆಯುದರದಿ ಪುಟ್ಟಿತು ಕೂಸು ರಾಮನ ಚರಣಕೆ ಎರಗಿತು ಕೂಸು ಸೀತೆಗೆ ಉಂಗುರ ಕೊಟ್ಟಿತು ಕೂಸು ಲಂಕಾಪುರವನೆ ಸುಟ್ಟಿತು ಕೂಸು || ಬಂಡಿ ಅನ್ನವನುಂಡಿತು ಕೂಸು ಬಕನ ಪ್ರಾಣವ ಕೊಂದಿತು ಕೂಸು ವಿಷದ ಲಡ್ಡುಗೆ ಮೆದ್ದಿತು ಕೂಸು ಮಡದಿಗೆ ಪುಷ್ಪವ ಕೊಟ್ಟಿತು ಕೂಸು || ಮಾಯಾವಾದಿಗಳ ಗೆದ್ದಿತು ಕೂಸು ದ್ವೈತಮತವನುದ್ಧರಿಸಿತು ಕೂಸು ಮಧ್ವರಾಯರೆಂಬ ಪೆಸರಿನ ಕೂಸು ಪುರಂದರವಿಠಲನ ಪ್ರೇಮದ ಕೂಸು ||
Transliteration
Kusina kandira Guru mukhya praanana kandira Balana kandira balavantana kandira |anupa| Anjane udaradi janisitu kusu Ramara padakkeragitu kusu Sitege ungura kottitu kusu Lankapuravane suttitu kusu |1| Bandi annava nungitu kusu Bakana pranava konditu kusu Vishada laddugeya medditu kusu Madadige pushpava kottitu kusu |2| Mayavellava gedditu kusu Madhva matavanuddharisitu kusu Purandaravitthalana daya…