Haridasa Sahitya — Vyasadasa

Kudire bandide

ಕುದುರೆ ಬಂದಿದೆ

Composer: Vadirajaru · Deity: Vishnu · Genre: Dasara Pada

Kannada lyrics

ಕುದುರೆ ಬಂದಿದೆ ಚೆಲುವ ಕುದುರೆ ಬಂದಿದೆ |ಪ| ವಾದಿರಾಜರಿಗೊಲಿದು ಬಂದು ಸ್ವಾದಿಪುರದಲ್ಲಿ ನಿಂದ|ಅ.ಪ| ಮುಂಗಾಲು ಕೆದರಿ ಕುಣಿವ ಕುದುರೆ ಹಿಂಗಾಲಿಲಸುರರ ಒದೆವ ಕುದುರೆ| ರಂಗನೆಂದರೆ ಸಲಹೊ ಕುದುರೆ ತುಂಗ ಹಯವದನ ಕುದುರೆ||1|| ಹಲ್ಲಣದೊಳಗೆ ನಿಲ್ಲದು ಕುದುರೆ ಬೆಲ್ಲ ಕಡಲೆ ಮೆಲ್ವ ಕುದುರೆ| ಫುಲ್ಲಭವನಿಗೊರೆದ ಕುದುರೆ ಚೆಲ್ವ ಹಯವದನ ಕುದುರೆ||2|| ಸುತ್ತಮುತ್ತಲಾಡುವ ಕುದುರೆ ಮತ್ತವಾದಿಯ ಗೆಲ್ವ ಕುದುರೆ| ಶತ್ರುಗಳೆಲ್ಲರ ಬಡಿವ ಕುದುರೆ ತತ್ವ ಹಯವದನ ಕುದುರೆ||3||

Transliteration

kudure bandide celuva kudure bandide |pa| vAdirAjarigolidu bandu svAdipuradalli ninda|a.pa| mungAlu kedari kuNiva kudure hingAlilasurara odeva kudure| ranganendare salaho kudure tunga hayavadana kudure||1|| hallaNadoLage nilladu kudure bella kaDale melva kudure| PullaBavanigoreda kudure celva hayavadana kudure||2|| suttamuttalADuva kudure mattavAdiya gelva kudure| SatrugaLellara baDiva kudure tatv…