Haridasa Sahitya — Vyasadasa

Kshira varidhi kannike marajanake

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ

Composer: Vijaya Dasaru · Deity: Lakshmi Devi · Genre: Bhakti

Kannada lyrics

ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ ಈರೇಳು ಲೋಕನಾಯಿಕೆ |pa|| ವಾರವಾರಕೆ ಆರಾಧಿಪುದಕೆ ಚಾರುಮತಿಯ ಕೊಡು ದೂರ ನೋಡದಲೆ ಅಪ ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿ ವೇದವತಿಯೆ ರುಕ್ಮಿಣಿ ವೇದ ವೇದಾಂತದಭಿಮಾನಿ ವಾರಿಜ ಪಾಣಿ ಆದಿ ಮಧ್ಯಾಂತ ಗುಣಮಣಿ ಸಾಧು ಜನರ ಹೃನ್ಮಂದಿರ ವಾಸಿನಿ ಭೇದಗೊಳಿಪ ಕಾಮಕ್ರೋಧಗಳೋಡಿಸಿ ನೀ ದಯದಿಂದಲೆ ಮುಂದೆ ಗತಿಗೆ ಪಂಚ ಭೇದಮತಿಯ ಕೊಡು ಮಾಧವ ಪ್ರಿಯಳೆ ||1|| ಶ್ರೀ ಮಾಯಾ ಜಯಾ ಕೃತಿ ಶಾಂತಿದೇವಿ ಜಯಂತೆ ನಾಮದೊಳಪ್ಪ ಗುಣವಂತೆ ಕೋಮಲವಾದ ವೈಜಯಂತೆ ಧರಿಸಿದ ಶಾಂತೆ ಸೋಮಾರ್ಕ ಕೋಟಿ ಮಿಗೆ ಕಾಂತೆ ತಾಮರಸಾಂಬಕೆ ರಮೆ ಲಕುಮಿ ಸತ್ಯ ಭಾಮೆ ಭವಾರಣ್ಯ ಧೂಮಕೇತಳೆ ಯಾಮ ಯಾಮಕೆ ಹರಿ ನಾಮವ ನುಡಿಸಿ ಉತ್ತಮರೊ…

Transliteration

Kshira varidhi kannike marajanake Irelu lokanayike |pa|| Varavarake aradhipudake carumatiya kodu Dura nodadale apa Sridhara durgi ambrani nitya kalyani Vedavatiye rukmini Veda vedantadabimani varija pani Adi madhyanta gunamani Sadhu janara hrunmandira vasini Bedagolipa kamakrodhagalodisi Ni dayadindale munde gatige panca Bedamatiya kodu madhava priyale ||1|| Sri maya jaya kruti santidevi jayante N…